ನಿರ್ಮಾಣ ಕಾರ್ಮಿಕರ ಸೋಗಲ್ಲಿ ರಾಜಸ್ಥಾನ, ಉತ್ತರಪ್ರದೇಶದ ಕಳವು ತಂಡ ಜಿಲ್ಲೆಯಲ್ಲಿ

0
39

ಕಾಸರಗೋಡು: ಬ್ಯಾಂಕ್‌ಗಳ ಸಹಿತ ಬೃಹತ್ ಹಣಕಾಸು ಸಂಸ್ಥೆಗಳ ಕಳವಿಗೆ ಗುರಿಯಿರಿಸಿ ತರಬೇತಿ ಲಭಿಸಿದ ವೃತ್ತಿಪರ ಕಳವು ತಂಡಗಳು ಕಾಸರಗೋಡು ಜಿಲ್ಲೆಯಲ್ಲಿ ಬೀಡು ಬಿಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಂಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಾರೀ ಕಳ್ಳತನ ನಡೆಯಲು ಸಾಧ್ಯತೆಯಿದೆ ಯೆಂದೂ ಪೊಲೀಸರು ಮುನ್ನೆಚ್ಚರಿಕೆ  ನೀಡಿದ್ದಾರೆ. ಒಂದು ತಿಂಗಳೊಳಗೆ ಮೂರನೇ ಬಾರಿ ಇಂತಹ ಮುನ್ನೆಚ್ಚರಿಕೆ ನೀಡಲಾಗಿದೆ. ಇತ್ತೀಚೆಗೆ ಬಂದಡ್ಕದಲ್ಲಿ ಸುಮಂಗಲಿ ಜ್ಯುವೆ ಲ್ಲರಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಅರ್ಧಕಿಲೋದಷ್ಟು ಚಿನ್ನವನ್ನು ದೋಚಿದ್ದರು.

ಪ್ರಸ್ತುತ ಘಟನೆ ನಡೆಯುವ ಕೆಲವೇ ದಿನಗಳ ಹಿಂದೆ ಕಳ್ಳರ ಬಗ್ಗೆ ಮುನ್ಸೂಚನೆ ನೀಡಲಾ ಗಿತ್ತು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಜ್ಯುವೆಲ್ಲರಿ ಕಳವು ನಡೆಯಲು ಕಾರಣವಾಯಿತೆಂದೂ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವುದಾಗಿ ಸಂಶಯಿಸಲಾದ ಕಳವು ತಂಡದಲ್ಲಿ ರಾಜಸ್ತಾನ, ಉತ್ತರ ಪ್ರದೇಶ ರಾಜ್ಯದವರು ಒಳ ಗೊಂಡಿದ್ದಾರೆ. ಇವರು ನಿರ್ಮಾಣ ಕಾರ್ಮಿಕರೆಂಬ ಸೋಗಿನಲ್ಲಿ ಜಿಲ್ಲೆಯಲ್ಲಿ ತಂಗಿದ್ದಾರೆ. ಆದ್ದರಿಂದ ಅವರಲ್ಲಿ ಕಳ್ಳರು ಯಾರು ಎಂದು ಗುರುತಿಸಲಾಗದ ಸ್ಥಿತಿ ಉಂಟಾಗಿದೆ. ಕಳವು ಯತ್ನ ವೇಳೆ ಮಾತ್ರವೇ ಅವರನ್ನು ಬಲೆಗೆ ಹಾಕಿಕೊಳ್ಳಲು ಸಾಧ್ಯವಿದೆಯೆಂದೂ ಈ ಹಿನ್ನೆಲೆಯಲ್ಲಿ ಅತೀ ಜಾಗ್ರತೆಪಾಲಿಸಬೇಕೆಂದೂ ಇದೀಗ ನೀಡಿದ ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY