ಕೂಡ್ಲು ಬ್ಯಾಂಕ್ ದರೋಡೆ: ತಲೆಮರೆಸಿಕೊಂಡ ಆರೋಪಿ ಎರ್ನಾಕುಳಂನಿಂದ ಸೆರೆ

0
347

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣದ ಪ್ರಧಾನ ಆರೋಪಿಗಳಲ್ಲೋರ್ವನಾಗಿದ್ದು ಈತನಕ ತಲೆಮರೆಸಿಕೊಂಡಿದ್ದ  ಮೂಲತಃ ಕೂಡ್ಲು ಚೌಕಿ ನಿವಾಸಿ ಹಾಗೂ ಈಗ ಬಂದ್ಯೋಡಿನಲ್ಲಿ ವಾಸಿಸುತ್ತಿರುವ ಮುಜೀಬ್ ನನ್ನು  ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳು ವಲ್ಲಿ ಪೊಲೀಸರು   ಸಫಲರಾಗಿದ್ದಾರೆ.

ಕಳೆದ ಸೆ. ೭ರಂದು ಹಾಡ ಹಗಲೇ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು.  ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಸೂತ್ರದಾರನೆಂದು ಪೊಲೀಸರು ಹೇಳುತ್ತಿರುವ ಮೂಲತಃ ಕೂಡ್ಲು ಚೌಕಿ ನಿವಾಸಿಯಾಗಿರುವ ಈಗ ಬಂದ್ಯೋಡಿನಲ್ಲಿ ವಾಸಿಸುತ್ತಿರುವ ಶೆರೀಫ್ (೪೨), ಕೂಡ್ಲು ಚೌಕಿಯ ಅಬ್ದುಲ್ ಕಲಾಂ (೩೫), ಉಳಿಯತ್ತಡ್ಕ ನೇಶನಲ್ ನಗರದ ಅರ್ಶಾದ್ (೨೪) ಶಾನವಾಜ್, ಮಶೂಕ್ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಪ್ರಧಾನ ಆರೋಪಿಗಳ ಲ್ಲೋರ್ವನಾಗಿರುವ ಮುಜೀಬ್ ಈತನಕ ಹಲವೆಡೆಗಳಲ್ಲಾಗಿ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ಈ ಮಧ್ಯೆ ಆತ ಎರ್ನಾಕುಳಂನಲಿ ರುವ ಮಾಹಿತಿ  ಪೊಲೀಸರಿಗೆ ಲಭಿಸಿ ತ್ತು. ಅದರಂತೆ ಪೊಲೀಸರು ಎರ್ನಾಕುಳಂಗೆ ಸಾಗಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಆತನನ್ನು ಅಲ್ಲಿಂದ ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಆತನನ್ನು ಇಂದು ಕಾಸರಗೋಡಿಗೆ ತರಲಾಗು ವುದೆಂದು ಪೊಲೀಸರು  ತಿಳಿಸಿದ್ದಾರೆ.

ಬ್ಯಾಂಕ್‌ನಿಂದ ದರೋಡೆಗೈದ ೨೦ ಕಿಲೋ ಚಿನ್ನದ ಪೈಕಿ ೭ ಕಿಲೋ ಚಿನ್ನ ಮಾತ್ರವೇ ಪತ್ತೆಹಚ್ಚಲು ಸಾಧ್ಯವಾಗಿದೆ. ಬಾಕಿ ಚಿನ್ನ ಮುಜೀಬ್‌ನ  ಕೈಯ್ಯಲ್ಲಿರುವುದಾಗಿ ಪೊಲೀಸರು ಶಂಕಿಸುತ್ತಿದ್ದಾರೆ. ಈಗ ಆತ ಸಿಕ್ಕಿಬೀಳಿರುವ ಹಿನ್ನೆಲೆಯಲ್ಲಿ ಅದು ಬಾಕಿ ಚಿನ್ನದ ಪತ್ತೆಗೂ ಸಹಾಯಕವಾಗಲಿದೆಯೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY