ಕಲ್ಲಿಕೋಟೆಯಲ್ಲಿ ಮುಂದುವರಿದ ರಾಜಕೀಯ ಘರ್ಷಣೆ: ಇಂದೂ ಹರತಾಳ

0
49

ಕಲ್ಲಿಕೋಟೆ: ರಾಜಕೀಯ ಘರ್ಷಣೆ ವ್ಯಾಪಕಗೊಂಡ   ಕಲ್ಲಿಕೋಟೆಯಲ್ಲಿ  ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ. ರಾಜೀವ್‌ರ ಮನೆಗೆ ನಿನ್ನೆ ರಾತ್ರಿ ಕಲ್ಲೆಸೆತವುಂಟಾಗಿದೆ. ವಡಗರ, ವಳ್ಳಿಯೋಡ್ ಎಂಬಲ್ಲಿರುವ ಮನೆಗೆ ರಾತ್ರಿ ೧೨.೪೫ರ ವೇಳೆ ಆಕ್ರಮಣ ಉಂಟಾಗಿದ್ದು  ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿದೆ. ಬೈಕ್‌ನಲ್ಲಿ ತಲುಪಿದ ಇಬ್ಬರು ಮನೆಗೆ ಆಕ್ರಮಿಸಿ ಪರಾರಿಯಾಗಿರುವುದಾಗಿ ದೂರಲಾಗಿದೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚ್ಚೂರಿಯವರ ಮೇಲೆ ದೆಹಲಿಯಲ್ಲಿ ಇತ್ತೀಚೆಗೆ ಉಂಟಾದ ಹಲ್ಲೆಯತ್ನದ ಹೆಸರಲ್ಲಿ ಕೇರಳದಾದ್ಯಂತ ಸಿಪಿಎಂ-ಬಿಜೆಪಿ ಮಧ್ಯೆ ಘರ್ಷಣೆ ತೀವ್ರರೂಪಕ್ಕೆ ತಿರುಗಿದೆ. ಬಿಜೆಪಿ, ಸಿಪಿಎಂ ನೇತೃತ್ವದಲ್ಲಿ ನಿನ್ನೆ ನಡೆದ ಮೆರವಣಿಗೆ ಹಲವೆಡೆಗಳಲ್ಲಿ ಘರ್ಷಣೆಗೆ ಕಾರಣವಾಯಿತು. 

ಕಲ್ಲಿಕೋಟೆ ಜಿಲ್ಲೆಯಲ್ಲಿ ಉಭಯ ಪಕ್ಷಗಳ ಕಚೆರಿಗಳ ಮೇಲೆ ಆಕ್ರಮಣವುಂಟಾಗಿದೆ. ಸಿಪಿಎಂ ಜಿಲ್ಲಾ ಕಚೇರಿ ಮೇಲೆ ಉಂಟಾದ ಬಾಂಬೆಸೆತವನ್ನು ಪ್ರತಿಭಟಿಸಿ ನಿನ್ನೆ ಸಿಪಿಎಂ ನೇತೃತ್ವದಲ್ಲಿ ನಡೆದ ಮೆರವಣಿಗೆ ವೇಳೆ ಬಿಎಂಎಸ್ ಜಿಲ್ಲಾ ಕಚೇರಿಗೆ ತಂಡ ಆಕ್ರಮಿಸಿ ವ್ಯಾಪಕ ನಾಶನಷ್ಟವುಂಟು ಮಾಡಿದೆ. ಆಕ್ರಮಣವನ್ನು ಪ್ರತಿಭಟಿಸಿ   ಕಲ್ಲಿಕೋಟೆ ಜಿಲ್ಲೆಯಲ್ಲಿ ಬಿಎಂಎಸ್ ಸಂಘಪರಿವಾರ ಸಂಘಟನೆಗಳು ಕರೆ ನೀಡಿದ ಹರತಾಳ ಇಂದು ನಡೆಯುತ್ತಿದೆ.

ಸಿಪಿಎಂ ಕಚೇರಿ ಮೇಲೆ ನಡೆದ ಬಾಂಬು ಎಸೆತ ಪ್ರಕರಣದ ತನಿಖೆ  ಕಲ್ಲಿಕೋಟೆ ನೋರ್ತ್ ಅಸಿಸ್ಟೆಂಟ್ ಕಮಿಷನರ್ ನೇತೃತ್ವದಲ್ಲಿ ಹತ್ತು ಮಂದಿಯ ತಂಡ ನಡೆಸುತ್ತಿದೆ.

NO COMMENTS

LEAVE A REPLY