ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಸಾಧ್ಯತೆ: ವೆಳ್ಳಾಪಳ್ಳಿ ನಟೇಶನ್

0
342

ತಿರುವನಂತಪುರ: ಎಸ್‌ಎನ್‌ಡಿಪಿ ರಾಜಕೀಯ ಪಕ್ಷದ ಬೆಂಬಲವಿದ್ದರೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೇರಲಿದೆಯೆಂದು ಎಸ್ ಎನ್‌ಡಿಪಿ ನಾಯಕ ವೆಳ್ಳಾಪಳ್ಳಿ ನಟೇಶನ್ ನುಡಿದರು.

ಮುಂದಿನ ವಿಧಾನಸಭಾ ಚುನಾವ ಣೆಯಲ್ಲಿ ಎಸ್‌ಎನ್‌ಡಿಪಿ ಬಿಜೆಪಿಗೆ ಬೆಂಬಲ ನೀಡಲಿರುವುದು. ಎಸ್‌ಎನ್ ಡಿಪಿ ರಾಜಕೀಯ ಪಕ್ಷ ಕೇರಳದಲ್ಲಿ ನಿರ್ಣಾಯಕ ಶಕ್ತಿಯಾಗಲಿರುವುದು. ಬಿಜೆಪಿ ನೇತೃತ್ವ ೩೦ ಸ್ಥಾನಗಳನ್ನು ಪಡೆದರೆ ಇತರರನ್ನು ಸೇರಿಸಿಕೊಂಡು ಸರಕಾರ ರಚಿಸಲು ಸಾಧ್ಯವಿದೆಯೆಂದು ಅವರು ತಿಳಿಸಿದರು. ಈ ಹಿಂದೆ ಹಲವು ಬಾರಿ ಎಡರಂಗ ಹಾಗೂ ಐಕ್ಯರಂಗದೊಂದಿಗೆ ಎಸ್‌ಎನ್‌ಡಿಪಿ ಸಹಕರಿಸಿದೆ. ನೂತನ ರಾಜಕೀಯ ಪಕ್ಷ ರೂಪೀಕರಣ ತನಕ ಬಿಜೆಪಿಯೊಂದಿಗೆ ಸಂಬಂಧವಿಲ್ಲ ಎಂದು ಒತ್ತಿ ಹೇಳಿದ ಅವರು ಎಡರಂಗದೊಂದಿಗಿನ ಮೈತ್ರಿಯನ್ನು ಅವರು ತಳ್ಳಿ ಹಾಕಲಿಲ್ಲ. ಅಗತ್ಯ ಬಂದರೆ ಇದಕ್ಕೂ ತಯಾರು ಎಂದು ನುಡಿದರು.

NO COMMENTS

LEAVE A REPLY