ನಾಳೆ ಮದುವೆ: ವರ ನಾಪತ್ತೆ

0
321

ಕಾಸರಗೋಡು: ನಾಳೆ ಮದುವೆ ನಡೆಯಬೇಕಾಗಿದ್ದ ವರ ನಾಪತ್ತೆಯಾದ ಬಗ್ಗೆ ಕಾಸರಗೋಡು  ಪೊಲೀಸರಿಗೆ ದೂರು ನೀಡಲಾಗಿದೆ.

ಮೊಗ್ರಾಲ್ ಪುತ್ತೂರು ಚಾಯಿ ತೋಟ ನಿವಾಸಿ ರಹೀಂ(೩೪) ನಾಪತ್ತೆಯಾಗಿರುವುದಾಗಿ ಆತನ ಸಹೋದರ ಶಾಫಿ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಉತ್ಸವ ಕಾರ್ಯಕ್ರಮಗಳು ನಡೆಯುತ್ತಿರುವ ಪ್ರದೇಶಗಳಿಗೆ ಹೋಗಿ ಕಡಲೆ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ  ವ್ಯಕ್ತಿಯಾಗಿದ್ದಾನೆ ರಹೀಂ. ಆತನ ಮದುವೆ ನಿಶ್ಚಿತಾರ್ಥವೂ ಈಗಾಗಲೇ ನಡೆಸಲಾಗಿದೆ. ಅದರಂತೆ ನಾಳೆ ಆತನ ಮದುವೆ ನಡೆಯಬೇ ಕಾಗಿತ್ತು. ಈ ಮಧ್ಯೆ ಅಕ್ಟೋಬರ್ ೨೨ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ರಹೀಂ ಬಳಿಕ ಸಂಜೆ ಸಹೋದರಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಮಾತನಾಡಿದ್ದನೆಂದೂ, ಸಂಭಾಷಣೆ ಮಧ್ಯೆ ಫೋನ್‌ನ್ನು ದಿಢೀರ್ ಕಟ್ ಮಾಡಲಾಗಿತ್ತೆಂದೂ, ಆ ಬಳಿಕ ರಹೀಂನ ಕುರಿತಾದ ಯಾವುದೇ ಮಾಹಿತಿ ಲಭಿಸಿಲ್ಲವೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY