ಪಂಜದಲ್ಲಿ ಬಾವಿಕುಸಿತ

0
47

ಉಪ್ಪಳ: ಮಂಗಲ್ಪಾಡಿ ಪಂಜ ಎಂಬಲ್ಲಿ ಬಾವಿಯೊಂದು ಕುಸಿದಿದೆ. ಇಲ್ಲಿನ ಲಿಂಗಪ್ಪ ಬೆಳ್ಚಪ್ಪಾಡ ಎಂಬವರ ಮನೆ ಮುಂಭಾಗದಲ್ಲಿರುವ ಆವರಣಗೋಡೆ ಸಹಿತವಿರುವ ಬಾವಿಯ ಒಂದು ಬದಿ ಸಂಪೂರ್ಣ ಕುಸಿದುಬಿದ್ದಿದ್ದು, ಇನ್ನೊಂದು ಬದಿ ಯಾವುದೇ ಕ್ಷಣ ಕುಸಿಯಲು ಸಿದ್ಧವಾಗಿದೆ. ನಿನ್ನೆ ರಾತ್ರಿ ಸುಮಾರು ೭ ಗಂಟೆಗೆ ಬಾವಿಕುಸಿದಿದ್ದು, ರಾಟೆ, ಹಗ್ಗ, ಮೋಟಾರುಗಳೆಲ್ಲ ಬಾವಿಯೊಳಗೆ ಬಿದ್ದಿದೆ. ಸದ್ದುಕೇಳಿ ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರ ಕಾರ್ಯಕ ರ್ತರು ತಲುಪಿ ಮನೆಯವರಿಗೆ ನೆರವಾದರು. ಸುಮಾರು ೫೦ ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

NO COMMENTS

LEAVE A REPLY