ಕೂಡ್ಲು ಬ್ಯಾಂಕ್ ದರೋಡೆ: ಇನ್ನೋರ್ವ ಆರೋಪಿ ಸೆರೆ: ಕದ್ದ ಚಿನ್ನ ಮಾರಿ ಮುಜೀಬ್ ಖರೀದಿಸಿದ ಕಾರು ವಶ

0
341

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣದ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಳಂ ನಿವಾಸಿ ಜೋ ಮೋನ್ ಅಲಿಯಾಸ್ ಫಿಲಿಕ್ಸ್ (೨೮) ಎಂಬಾತ ಬಂಧಿತನಾದ ಆರೋಪಿ ಯಾಗಿದ್ದಾನೆ.  ಈತನನ್ನು ತಮಿಳ್ನಾಡಿನ ಉದುಮ್ ಪೇಟೆಯಿಂದ ಬಲೆಗೆ ಬೀಳಿಸಲು ಪೊಲೀಸರು ಸಫಲರಾಗಿದ್ದಾರೆ.  ಈತನಿಂದ ೨.೯೩ ಗ್ರಾಂ ಚಿನ್ನ ಮತ್ತು ೫.೨೪ ಲಕ್ಷ ರೂ. ವಶಪಡಿಸಿಕೊಳ್ಳ ಲಾಗಿದೆಯೆಂದು ತಮಿಳ್ನಾಡಿನ ತಿರುಪೂ ರುನಲ್ಲಿ ಆತ ಕದ್ದ ಚಿನ್ನದ ಒಂದು ಪಾಲನ್ನು ೭.೩೦ ಲಕ್ಷ ರೂ. ಸಾಲ ಪಡೆದಿ ದ್ದಾನೆಂದೂ  ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಪ್ರಧಾನ ಆರೋಪಿಗಳಲ್ಲೋರ್ವನಾದ ಮೂಲತಃ ಕೂಡ್ಲು ಚೌಕಿ ನಿವಾಸಿ ಹಾಗೂ ಈಗ ಬಂದ್ಯೋಡಿನಲ್ಲಿ ವಾಸಿಸುತ್ತಿರುವ ಮುಜೀಬ್(೨೪)ನನ್ನು ಕಾಸರಗೋಡು ಸಿ.ಐ ಪಿ. ಕೆ. ಸುಧಾಕರನ್‌ರ ನೇತೃತ್ವದ ತಂಡ ನಿನ್ನೆ ಬಂಧಿಸಿತ್ತು. ಸೆಪ್ಟಂಬರ್ ೭ರಂದು ಬ್ಯಾಂಕ್ ದರೋಡೆ ನಡೆದಿತ್ತು. ಆ ಬಳಿಕ ಆತ ತಲೆ ಮರೆಸಿಕೊಂಡಿದ್ದನು. ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಂತೆ ನಿನ್ನೆ ಆತ ಪೊಲೀಸರ ಕೈಗೆ ಸಿಲುಕಿದ್ದಾನೆ. ಬ್ಯಾಂಕ್‌ನಿಂದ ೨೦ ಕಿಲೋ ಚಿನ್ನ ಮತ್ತು ೧೩ ಲಕ್ಷ ರೂ. ದರೋ ಡೆಗೈಯ್ಯಲಾಗಿತ್ತು. ಆ ಪೈಕಿ ಮೊದಲ ಕಾರ್ಯಾಚರಣೆಯಲ್ಲಿ ೭.೧೦೯ ಕೆ.ಜಿ. ಚಿನ್ನವನ್ನೂ ನಂತರದ ಕಾರ್ಯಾ ಚರಣೆಯಲ್ಲಿ ೩೯೦ ಗ್ರಾಂ ಚಿನ್ನವನ್ನು ಪೊಲೀಸರು ಈ ಹಿಂದೆ ಬಂಧಿತರಾದ ಆರೋಪಿಗಳಿಂದ ವಶಪಡಿಸಿಕೊಂಡಿ ದ್ದರು. ಮುಜೀಬ್ ಸೆರೆಗೊಳಗಾಗುವುz ರೊಂದಿಗೆ ಬಾಕಿ   ೭.೬೬೬ಕೆ.ಜಿ ಚಿನ್ನವನ್ನು   ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಒಂದು ಕಿಲೋ ಚಿನ್ನವನ್ನು ಆತ ತಮಿಳ್ನಾಡಿನ ಕೊಯಂಬತ್ತೂರಿನ ಚಿನ್ನದಂಗಡಿಯೊಂದಕ್ಕೆ ಮಾರಾಟ ಮಾಡಿ  ಲಭಿಸಿದ ಹಣದ ಪೈಕಿ ೨೦ ಲಕ್ಷ ರೂ. ಬಳಸಿ ಮೂರು ಲಕ್ಷ ರೂ. ಮೌಲ್ಯದ ಒಂದು ಕಾರು  ಖರೀದಿಸಿದ್ದನು. ಮಾತ್ರವಲ್ಲದೆ, ಮಡಿಕೇರಿ ವಿರಾಜಪೇಟೆಯಲ್ಲಿ ಆಡಂಬರ ಮನೆಯನ್ನು ಬಾಡಿಗೆಗೆ ಪಡೆದು  ಅಲ್ಲಿ   ಜೀವಿಸುತ್ತಿದ್ದನು. ಆ ಬಾಡಿಗೆ ಮನೆಯನ್ನು ಖರೀದಿಸಲು ಆತ ೪ ಲಕ್ಷ ರೂ.  ಮುಂಗಡವಾಗಿ ನೀಡಿದ್ದನೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಆತ ವಿರಾಜಪೇಟೆಯಿಂದಲೇ  ನ್ಯಾಯ ವಾದಿಯೋವರ ಮೂಲಕ ಕೇರಳ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದನು. ಅದಕ್ಕಾಗಿ ಆತ ನ್ಯಾಯವಾದಿಗೆ ೫೦ಸಾವಿರ ರೂ. ನೀಡಿದ್ದನೆಂದೂ,  ಕದ್ದ ಹಣವನ್ನು ಬಳಸಿ ಆತ ಅಲ್ಲಿ ಆಡಂಬರ ಜೀವನ ಸಾಗಿಸುತ್ತಿದ್ದ ನೆಂದೂ  ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್‌ನಿಂದ ದರೋಡೆಗೈಯ್ಯಲ್ಪಟ್ಟ ೧೩ ಲಕ್ಷ ರೂ.ನಲ್ಲಿ ೫ ಲಕ್ಷ ರೂ.ವನ್ನು ಮುಜೀಬ್ ಪಡೆದಿದ್ದನೆಂದೂ  ಪೊಲೀಸರು ತಿಳಿಸಿದ್ದಾರೆ.

ಮುಜೀಬ್ ಖರೀದಿಸಿದ ಕಾರನ್ನು ಪೊಲೀಸರು ವಿರಾಜಪೇಟೆಯಿಂದ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ದರೋಡೆಗೈದ ಚಿನ್ನದ ಪೈಕಿ ೨ ಕಿಲೋ ಚಿನ್ನವನ್ನು ಇನ್ನೋರ್ವ ಆರೋಪಿ ಜೋಮೋನ್‌ಗೆ ನೀಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆತನೂ ಈಗ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಆ ಚಿನ್ನವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವ ಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಈ ಹಿಂದೆಯೇ ಬಂಧಿಸಿದ್ದರು. ಚೌಕಿಯ ಅಬ್ದುಲ್ ಕರೀಂ(೩೨), ಚೌಕಿ ಬದರ್ ನಗರದ ಕೆ. ಎ. ಮುಹಮ್ಮದ್ ಸಾಬೀರ್ (೨೭), ಚೌಕಿ ಕುನ್ನಿಲ್‌ನ ಅಬ್ದುಲ್ ಮಶೂಕ್ (೨೫), ಬಂದ್ಯೋಡ್‌ನ ಮುಹ ಮ್ಮದ್ ಶೆರೀಫ್(೪೨), ಚೌಕಿ ಮಜಲ್‌ನ ಶಾನು ಅಲಿಯಾಸ್ ಶಾನವಾಜ್ (೨೨) ಮತ್ತು ಉಳಿಯತ್ತಡ್ಕ ನ್ಯಾಷನಲ್ ನಗರ ರಸ್ತೆ ಬಳಿಯ ಅರ್ಶಾದ್(೨೪) ಎಂಬಿವರು ಈ ಹಿಂದೆ ಬಂಧಿತರಾದ  ಆರೋಪಿಗಳಾಗಿ ದ್ದಾರೆ. ಸೆಪ್ಟಂಬರ್ ೭ರಂದು ಅಪರಾಹ್ನ ಹಾಡಹಗಲೇ ಮುಖವಾಡ ಧರಿಸಿ ಬಂದ ತಂಡ ಬ್ಯಾಂಕ್‌ನೊಳಗೆ ಅಕ್ರಮವಾಗಿ ನುಗ್ಗಿ ಚಾಕು ತೋರಿಸಿ ಬ್ಯಾಂಕ್‌ನ ಮಹಿಳಾ ಸಿಬ್ಬಂದಿಗಳು ಮತ್ತು ಓರ್ವೆ ಗ್ರಾಹಕಿಯನ್ನು ದಿಗ್ಭಂಧನಗೊಳಪಡಿಸಿ ಬ್ಯಾಂಕ್‌ನಿಂದ ನಗ-ನಗದು ದರೋಡೆಗೈದಿತ್ತು. ಈ ಪ್ರಕರಣದ ಇನ್ನೋರ್ವ ಆರೋಪಿ ಶಶಿ ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಶೋಧ  ಮುಂದುವರಿಸುತ್ತಿದ್ದಾರೆ.

ನಿನ್ನೆ ಬಂಧಿತನಾದ ಆರೋಪಿ ಮುಜೀಬ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಆತನನ್ನು ಇಂದು ಯಾ ನಾಳೆಯೊಳ ಗಾಗಿ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಸಾಧ್ಯತೆ ಇದೆ.

NO COMMENTS

LEAVE A REPLY