ಸೇತುವೆ ತಡೆಗೋಡೆಗೆ ಸ್ಕೂಟರ್ ಢಿಕ್ಕಿ: ಸವಾರರಿಬ್ಬರಿಗೆ ಗಂಭೀರ

0
395

ಮಂಜೇಶ್ವರ: ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆಂi ವುದನ್ನು ತಪ್ಪಿಸಲು ಯತ್ನಿಸಿದಾಗ ಸೇತುವೆಯ ತಡೆಗೋಡೆಗೆ ಸ್ಕೂಟರ್ ಢಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ನಿನ್ನೆ ಮುಂಜಾನೆ ಉಪ್ಪಳದಲ್ಲಿ ಸಂಭವಿಸಿದೆ. ಸ್ಕೂಟರ್ ಸವಾರರಾದ ಮಂಜೇಶ್ವರ ನಿವಾಸಿ ಮಂಜುನಾಥ(೨೪), ಹಿಂಬದಿ ಸವಾರ ಗೌತಮ್(೨೦) ಗಾಯ ಗೊಂಡವರು.  ಇವರಲ್ಲಿ ಗೌತಮ್‌ನ್ನು ಮಂಗಳೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಮಂಜೇಶ್ವರ ರಥಬೀದಿಯಲ್ಲಿ ನಡೆದ ಶಾರದೋತ್ಸವ ವಿಸರ್ಜನಾ ಮೆರವಣಿಗೆ ಕಳೆದು ಇವರಿಬ್ಬರು ಮನೆಗೆ ಹಿಂತಿರುಗುತ್ತಿದ್ದಾಗ ಉಪ್ಪಳ ಹೊಳೆಯ ಸೇತುವೆಗೆ ಸಮೀಪಿಸುತ್ತಿದ್ದಂತೆ ಎದುರಿನಿಂದ ಲಾರಿಯೊಂದು ವಾಹನವೊಂದನ್ನು ಹಿಂದಿಕ್ಕಿ ಸಾಗುತ್ತಿರುವಾಗ ಲಾರಿ  ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಮಧ್ಯೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY