ಮಲೆಯಾಳ ಕಲಿಯಲಾಗದ ವ್ಯಥೆ ಯತೀಂಖಾನದಿಂದ ಪರಾರಿಯಾಗಿ ಸಿಕ್ಕಿಬಿದ್ದ ಬಾಲಕಿ

0
102

ಕುಂಬಳೆ: ಮಲೆಯಾಳ ಕಲಿಯಲು ಅಸಾಧ್ಯವಾದುದರಿಂದ ಕರ್ನಾಟಕದ ಬೆಳ್ತಂಗಡಿ ನಿವಾಸಿಯಾದ ೧೪ರ ಬಾಲಕಿ ಯತೀಂಖಾನದಿಂದ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಮಧ್ಯೆ ನಾಗರಿಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಕಟ್ಟುಕತೆ ಸೃಷ್ಟಿಸಲು ಯತ್ನಿಸಿರುವುದಾಗಿ ಹೇಳಲಾಗುತ್ತಿದೆ. ಕೊನೆಗೆ ಪೊಲೀಸರು ತಲುಪಿ ಬಾಲಕಿಯನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದಾಗಲೇ ಸತ್ಯಸಂಗತಿ ಬಹಿರಂಗಗೊಂಡಿದೆ.

ನಿನ್ನೆ ಸಂಜೆ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ “ಕುಬಣೂರು ಗ್ರಾಮ ಕಚೇರಿ ಬಳಿ ಕೆಲಸ ಪೂರ್ತಿಗೊಳ್ಳದ ಕ್ವಾರ್ಟರ್ಸ್ ಕಟ್ಟಡದಲ್ಲಿ ಬಾಲಕಿಯನ್ನು  ನಾಗರಿಕರು ಕಂಡಿದ್ದಾರೆ. ಬಾಲಕಿ ಶಾಲಾ ಸಮವಸ್ತ್ರ ಧರಿಸಿದ್ದಳು. ಇದರಿಂದ ಸಂಶಯಗೊಂಡ ನಾಗರಿಕರು ವಿಚಾರಿಸಿದಾಗ ತಾನು ಯತೀಂಖಾನವೊಂದರ ವಿದ್ಯಾರ್ಥಿನಿಯಾಗಿದ್ದೇನೆಂದೂ ತನ್ನನ್ನು ಕೆಂಪು ಬಣ್ಣದ ಇನ್ನೋವಾ ಕಾರಿನಲ್ಲಿ ತಲುಪಿದ ನಾಲ್ಕು ಮಂದಿ ಅಪಹರಿಸಿದ್ದಾರೆ. ಬೊಬ್ಬಿಟ್ಟ್ಟಾಗ ತಂಡ ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾಯಿತೆಂದು ಬಾಲಕಿ ತಿಳಿಸಿದ್ದಾಳೆ. ಈ ಬಗ್ಗೆ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಎಸ್.ಐ ಜಯಶಂಕರ್ ಸ್ಥಳಕ್ಕೆ ತಲುಪಿ ಬಾಲಕಿಯನ್ನು ವಿಚಾರಿಸಿದಾಗ ತನ್ನನ್ನು ತಂಡ ಅಪಹರಿಸಿದುದಾಗಿ ಪುನರುಚ್ಛರಿಸಿದಳು. ಆದರೆ ಬಾಲಕಿಯ ಹೇಳಿಕೆಯಲ್ಲಿ ಸಂಶಯಗೊಂಡು ಮಹಿಳಾ ಪೊಲೀಸರ ಸಹಾಯದಿಂದ ವಿಚಾರಣೆಗೊಳಪಡಿಸಿದಾಗ ಅಪಹರಿಸಲಾಗಿದೆಯೆಂಬ ಆರೋಪ ಸುಳ್ಳೆಂದು ಬಹಿರಂಗಗೊಂಡಿದೆ. ತನ್ನನ್ನು ಯಾರೂ ಅಪಹರಿಸಿಲ್ಲವೆಂದೂ ಕರ್ನಾಟಕ ನಿವಾಸಿಯಾದ ತನಗೆ ಶಾಲೆಯಲ್ಲಿ ಮಲೆಯಾಳ ಕಲಿಯಲಾ ಗದ ವ್ಯಥೆಯಿಂದ ಪರಾರಿಯಾಗಿರುವುದಾಗಿ ಬಾಲಕಿ ತಿಳಿಸಿದ್ದಾಳೆ” ಎಂದು ಪೊಲೀಸರು ತಿಳಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY