ಬಂಡುಕೋರ ಚಟುವಟಿಕೆ: ಜಿಲ್ಲ್ಲೆಯಲ್ಲಿ ೨೦ ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಜಾ

0
327

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ಯುಡಿಎಫ್‌ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡುಕೋರರಾಗಿ ಸ್ಪರ್ಧಿಸಿದ ಹಾಗೂ ಅವರಿಗೆ ಸಹಾಯ ನೀಡಿದವರೂ ಸೇರಿದಂತೆ ೨೦ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದಿಂದ ವಜಾಗೈಯ್ಯಲಾ ಗಿದೆಯೆಂದು ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ನ್ಯಾ. ಸಿ. ಕೆ. ಶ್ರೀಧರನ್ ತಿಳಿಸಿದ್ದಾರೆ.

ಇದರಲ್ಲಿ ಹೊಸದುರ್ಗ ನಗರ ಸಭೆಯ ಸ್ಥಾಯಿ ಸಮಿತಿ ಸದಸ್ಯ ಟಿ. ಕುಂಞಿಕೃಷ್ಣನ್, ಹೊಸದುರ್ಗ ನಗರಸಭೆಯ ಮಾಜಿ ಅಧ್ಯಕ್ಷ ವಿ. ಗೋಪಿ, ಯೂತ್ ಕಾಂಗ್ರೆಸ್ ಕಾಞಂಗಾಡ್ ಮಂಡಲ ಕಾರ್ಯ ದರ್ಶಿ ವಿನೋದ್ ಆವಿಕ್ಕೆರೆ, ಹೊಸ ದುರ್ಗ ನಗರಸಭೆಯ  ಬಂಡುಕೋರ ಅಭ್ಯರ್ಥಿಗಳಾದ ಪಿ. ವಿ. ಸುಮತಿ, ಕೆ. ಸಿಂಧು, ವೆಸ್ಟ್ ಎಳೇರಿ ಪಂಚಾಯ ತ್‌ನ     ಬಂಡುಕೋರ ಅಭ್ಯರ್ಥಿ ರಾಮ ಕೃಷ್ಣನ್, ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಜೋಸ್ ಕಾಪ್ಪಿಲ್, ವಾರ್ಡ್ ಸದಸ್ಯ ಜಯದೇವನ್, ಕೋಡಮಲ ಬ್ಲೋಕ್ ಡಿವಿಷನ್ ಬಂಡುಕೋರ ಅಭ್ಯರ್ಥಿ ಪಿ. ವೇಣುಗೋಪಾಲ್, ಚೆಮ್ನಾಡ್ ಪಂ.ನ ಬಂಡುಕೋರ ಅಭ್ಯರ್ಥಿ ಪ್ರಿಯಾ ಬಾಲಕೃಷ್ಣನ್ ಸೇರಿದಂತೆ ಒಟ್ಟು ೨೦ ಮಂದಿಯನ್ನು ಪಕ್ಷದಿಂದ ವಜಾಗೈಯ್ಯಲಾಗಿ ದೆಯೆಂದು ಕಾಂಗ್ರೆಸ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

NO COMMENTS

LEAVE A REPLY