ಲಾರಿ ಚಾಲಕನಿಗೆ ಹಲ್ಲೆ: ಇಬ್ಬರ ವಿರುದ್ಧ ಕೇಸು

0
54

ಮಂಜೇಶ್ವರ: ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಲಾರಿ ಚಾಲಕನಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಸಂಬಂಧ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತೃಶೂರು ನಿವಾಸಿ ಪುರುಷೋತ್ತಮರ ಪುತ್ರ ಲಾರಿ ಚಾಲಕ ಉಮೇಶ(೪೬) ಗಾಯಗೊಂಡಿದ್ದಾರೆ. ಇವರ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊನ್ನೆ ರಾತ್ರಿ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಲಾರಿ ವಾಮಂಜೂರಿಗೆ ತಲುಪಿದಾಗ ಬೈಕ್ ಸವಾರರು ವಾಗ್ವಾದ ನಡೆಸಿ  ಹಲ್ಲೆ ನಡೆಸಿರು ವುದಾಗಿ ಉಮೇಶ   ದೂರಿದ್ದಾರೆ. ಗಾಯಾಳು ತೊಕ್ಕೋಟು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

NO COMMENTS

LEAVE A REPLY