ಬಸ್ ನಿಲ್ದಾಣಕ್ಕೆ ಅಪ್ಪಳಿಸಿದ ಮರ

0
23

ಮಂಜೇಶ್ವರ: ಮಜಿರ್‌ಪಳ್ಳ ಬಳಿಯ ಗಾಂಧಿನಗರದಲ್ಲಿ ಬೃಹತ್ ಆಲದ ಮರ ಬಸ್ ವೈಟಿಂಗ್ ಶೆಡ್‌ನ ಮೇಲೆ ಬಿದ್ದಿದೆ. ಇಂದು ಮುಂಜಾನೆ ೪.೩೦ರ ವೇಳೆ ಮರ ಬಿದ್ದಿದೆಯೆಂದು ಪರಿಸರ ನಿವಾಸಿಗಳು ತಿಳಿಸಿದ್ದಾರೆ. ಇದರಿಂದ ವೈಟಿಂಗ್ ಶೆಡ್‌ನ ಒಂದು ಭಾಗ ಕುಸಿದಿದೆ. ಹಗಲು ಹೊತ್ತಿನಲ್ಲಿ ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್ ವೈಟಿಂಗ್ ಶೆಡ್ಡನ್ನು ಆಶ್ರಯಿಸುತ್ತಿದ್ದಾರೆ.

NO COMMENTS

LEAVE A REPLY