ಬಾಲಕನಿಗೆ ಸಲಿಂಗರತಿ ಕಿರುಕುಳ: ಯುವಕ ಸೆರೆ

0
41

 ಕಾಸರಗೋಡು: ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಸಿ.ಐ. ಬಾಬು ಪೆರಿಂಙೋತ್, ಎಸ್.ಐ. ಮೆಲ್ವಿನ್ ಜೋಸ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಮೊಹಮ್ಮದ್ ಸಫ್ವಾನ್(೨೪) ಬಂಧಿತ ಆರೋಪಿಯಾಗಿದ್ದಾನೆ. ನಾಯಮ್ಮಾರಮೂಲೆಯ ೧೪ರ  ಹರೆಯದ ಬಾಲಕನಿಗೆ ೨೦೧೬ ಅಕ್ಟೋಬರ್‌ನಲ್ಲಿ ವಿದ್ಯಾನಗರದ ಕ್ವಾರ್ಟರ್ಸ್‌ವೊಂದರಲ್ಲಿ ಸಲಿಂಗ ರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಫ್ವಾನ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ  ಈ ಹಿಂದೆ ಮೂವರನ್ನು ಬಂಧಿಸಿದ್ದರು. ಇನ್ನು ಇಬ್ಬರ ಬಂಧನಕ್ಕೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY