ಹಾಸ್ಟೆಲ್ ಸೌಕರ್ಯವಿಲ್ಲ: ಕೇಂದ್ರೀಯ ವಿ.ವಿ ವಿದ್ಯಾರ್ಥಿಗಳು ತರಗತಿಯಲ್ಲೇ ವಾಸ

0
25

ಕಾಸರಗೋಡು: ವಾಸ ಸೌಕರ್ಯ ಏರ್ಪಡಿಸದಿರುವುದನ್ನು ಪ್ರತಿಭಟಿಸಿ ಕೇಂದ್ರೀಯ ವಿ.ವಿ ವಿದ್ಯಾರ್ಥಿಗಳು ಇಂದು ವೈಸ್‌ಚಾನ್ಸಲರ್‌ರ ಕಚೇರಿ ಹಾಗೂ ಲೈಬ್ರೆರಿ ಮುಂದೆ ಧರಣಿ ನಡೆಸುತ್ತಿದ್ದಾರೆ.

ಹಾಸ್ಟೆಲ್ ಸೌಕರ್ಯ ಒದಗಿ ಸದಿರುವುದನ್ನು ಪ್ರತಿಭಟಿಸಿ ನಿನ್ನೆ ರಾತ್ರಿ ಪೆರಿಯ ಕೇಂದ್ರೀಯ ವಿವಿ ಕೇಂದ್ರವಾದ ಲೈಬ್ರೆರಿಯಲ್ಲಿ ವಿದ್ಯಾರ್ಥಿಗಳು ತಂಗಿದ್ದಾರೆ.

ನಾಯಮ್ಮಾರಮೂಲೆ, ಪಡನ್ನಕ್ಕಾಡ್ ಕ್ಯಾಂಪಸ್‌ಗಳ ವಿದ್ಯಾರ್ಥಿಗಳು ಆಯಾ ಕ್ಯಾಂಪಸ್‌ಗಳ ತರಗತಿಗಳಲ್ಲಿ ನಿನ್ನೆ ರಾತ್ರಿ ತಂಗಿದ್ದಾರೆ. ಆದರೆ ಈ ವಿಷಯದಲ್ಲಿ  ವೈಸ್ ಚಾನ್ಸಲರ್ ಅಥವಾ ರಿಜಿಸ್ಟ್ರಾರ್ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಮುಂದಾಗಿಲ್ಲವೆಂದು ವಿದ್ಯಾರ್ಥಿಗಳು ತಿಳಿಸುತ್ತಿದ್ದಾರೆ.

ಇದನ್ನು ಪ್ರತಿಭಟಿಸಿ ಇಂದು ನಾಯಮ್ಮಾರಮೂಲೆ, ಪಡನ್ನಕ್ಕಾಡ್ ಕ್ಯಾಂಪಸ್‌ಗಳ ವಿದ್ಯಾರ್ಥಿಗಳು ವಿ.ವಿ ಕೇಂದ್ರ ದಲ್ಲಿ ಧರಣಿ ನಡೆಸುತ್ತಿದ್ದಾರೆ. ಆರು ತಿಂಗಳಿನಿಂದ ವೈಸ್ ಚಾನ್ಸಲರ್ ಸಹಿತ ಅಧಿಕಾರಿಗಳಲ್ಲಿ ವಾಸ ಸೌಕರ್ಯಗಳ ಸಮಸ್ಯೆ ಬಗ್ಗೆ ತಿಳಿಸಲಾಗಿತ್ತು. ಆದರೆ ಅಧಿಕಾರಿಗಳು ಇದುವರೆಗೂ ಗಮನಹರಿಸಿಲ್ಲವೆಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.

NO COMMENTS

LEAVE A REPLY