ಕಲ್ಲಂಗಡಿ ವಿ. ಶಂಕರ ಗಟ್ಟಿ ನಿಧನ

0
34

ಮೊಗ್ರಾಲ್ ಪುತ್ತೂರು: ಚೌಕಿ ಕಲ್ಲಂಗಡಿ ಹೊಸಮನೆ ಆಡಳಿತ ಮೊಕ್ತೇಸರರೂ, ಗಟ್ಟಿ ಸಮುದಾಯದ ಹಿರಿಯರಾದ ಕಲ್ಲಂಗಡಿ ಹೊಸಮನೆ ತರವಾಡಿನ ವಿ. ಶಂಕರಗಟ್ಟಿ(೮೦) ನಿಧನ ಹೊಂದಿದರು.

ವಿ.ಹಿಂ.ಪ ಮೊಗ್ರಾಲ್ ಪುತ್ತೂರು ಪಂಚಾಯತ್  ಮಾಜಿ ಉಪಾಧ್ಯಕ್ಷ ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರ ಮಾಜಿ ಮೊಕ್ತೇಸರ, ಕಾವುಗೋಳಿ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ, ಶಾಸ್ತಾ ನಗರ ಶ್ರೀ ಅಯ್ಯಪ್ಪ ಭಜನಾ ಮಂ ದಿರ,  ಹರಿಜಾಲ್ ಶ್ರೀ ಧೂಮಾವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಎಂಬಿವುಗಳ ಪದಾಧಿಕಾರಿಯಾಗಿ ಸಕ್ರಿಯವಾಗಿದ್ದರು. ಮೊಗ್ರಾಲ್ ಪುತ್ತೂರು ಪಂಚಾಯತ್‌ನಲ್ಲಿ ಧಾರ್ಮಿಕ ರಂಗದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದರು.

ಮೃತರು ಪತ್ನಿ ಸುಮತಿ, ಮಕ್ಕ ಳಾದ ಚಂದ್ರಾವತಿ, ಪ್ರೇಮಲತ (ಕುಂಬಳೆ ಪಂಚಾಯತ್ ಸದಸ್ಯೆ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಕೃಷ್ಣ ಗಟ್ಟಿ, ಸೋಮಪ್ಪ ಗಟ್ಟಿ ಈ ಹಿಂದೆ ನಿಧನರಾಗಿದ್ದಾರೆ.

ಶಂಕರ ಗಟ್ಟಿಯವರ ನಿಧನಕ್ಕೆ ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಸಂತಾಪ ಸೂಚಿಸಿದೆ.

NO COMMENTS

LEAVE A REPLY