ಕೋಟೂರಿನಲ್ಲಿ ಟೆಂಪೋ ಅಪಘಾತ: ಕೋಳಿಗಳ ಸಾವು

0
23

ಕೋಟೂರು: ಇಲ್ಲಿನ ಅಪಾಯಕಾರಿ ತಿರುವಿನಲ್ಲಿ ನಿನ್ನೆ ರಾತ್ರಿ ಕೋಳಿ ಸಾಗಿಸುತ್ತಿದ್ದ ಟೆಂಪೋ  ಅಪಘಾತಕ್ಕೀಡಾಗಿದೆ. ಸುಳ್ಯ ಭಾಗದಿಂದ ಆಗಮಿಸುತ್ತಿದ್ದ ಟೆಂಪೋ ತಿರುವಲ್ಲಿ ಗುಡ್ಡೆಗೆ ಗುದ್ದಿ ತಿರುಗಿ ನಿಂತ ಸ್ಥಿತಿಯಲ್ಲಿದೆ. ಟೆಂಪೋದಲ್ಲಿದ್ದ ಕೋಳಿಗಳಲ್ಲಿ ಹೆಚ್ಚಿನವುಗಳು ಸತ್ತು ಹೋಗಿದ್ದು, ಇವುಗಳನ್ನು ರಸ್ತೆ ಬದಿ ರಾಶಿ ಹಾಕಿದ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ಆದರೆ ಅಪಘಾತದಲ್ಲಿ ಯಾರಿಗೂ ಗಾಯವಾದ ಬಗ್ಗೆ ತಿಳಿದು ಬಂದಿಲ್ಲ ಎಂದು ಆದೂರು ಠಾಣೆಯಿಂದ ತಿಳಿಸಿದ್ದಾರೆ.

NO COMMENTS

LEAVE A REPLY