ಹಟ್ಟಿಯಿಂದ ಎರಡು ಹಸು, ಕರು ಕಳವು

0
663

ಮಂಜೇಶ್ವರ: ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳು ಹಾಗೂ 7 ದಿನದ ಕರುವನ್ನು ಕಳ್ಳರು ಕಳವುಗೈದಿದ್ದಾರೆ.

ಕಣ್ವತೀರ್ಥ ಬಳಿಯ ಅಂಜರೆ ನಿವಾಸಿ ದಿನೇಶ್ ಎಂಬವರ ಹಸುಗಳು ಹಾಗೂ ಕರುವನ್ನು ಕಳವುಗೈಯ ಲಾಗಿದೆ. ಇವರ ಮನೆಯಿಂದ  ೭೫ ಮೀಟರ್ ದೂರದಲ್ಲಿರುವ ಹಳೆ ಮನೆ ಬಳಿಯ ಹಟ್ಟಿಯಲ್ಲಿ ನಿನ್ನೆ ರಾತ್ರಿ ಈ ಹಸುಗಳನ್ನು ಕಟ್ಟಿಹಾಕಲಾಗಿತ್ತು. ಇಂದು ಬೆಳಿಗ್ಗೆ ಅಲ್ಲಿ ನೋಡಿದಾಗ ಅವು ನಾಪತ್ತೆಯಾಗಿರುವು ದು ತಿಳಿದುಬಂದಿದೆ. ಜಾನುವಾರು ಕಳ್ಳರು ಇದನ್ನು ಕದ್ದೊಯ್ದಿರಬಹುದೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದಿನೇಶ್ ದೂರು ನೀಡಿದ್ದಾರೆ. ಈ ಎರಡು ಹಸುಗಳಿಂದ ದಿನಕ್ಕೆ ೧೫ ಲೀಟರ್ ಹಾಲು ಸಿಗುತ್ತಿತ್ತು. ಈ ಹಾಲನ್ನು ಮಾರಾಟಗೈದು ಕುಟುಂಬ ಜೀವನ ಸಾಗಿಸುತ್ತಿತ್ತೆನ್ನಲಾಗಿದೆ. ಇದೀಗ ಹಸುಗಳು ಕಳವಿಗೀಡಾದುದರಿಂದ ಕುಟುಂಬ ಚಿಂತೆಗೀಡಾಗಿದೆ.

NO COMMENTS

LEAVE A REPLY