ನಾಳೆ ಖಾಸಗಿ ಬಸ್ ಮುಷ್ಕರ

0
86

ಕಾಸರಗೋಡು: ಪ್ರಯಾಣದರ ಹೆಚ್ಚಿಸಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿರಿಸಿ ನಾಳೆ ರಾಜ್ಯವ್ಯಾಪಕವಾಗಿ ಬಸ್ ಸೇವೆ ನಿಲುಗಡೆಗೊಳಿಸಿ ಮುಷ್ಕರ ಹೂಡಲು ಪ್ರೈವೆಟ್ ಬಸ್ ಆಪರೇಟರ್ಸ್ ಕಾನ್ಫಡರೇಷನ್ (ಖಾಸಗಿ ಬಸ್ ಮಾಲಕರ ಒಕ್ಕೂಟ) ತೀರ್ಮಾನಿಸಿದೆ.

ತಾವು ಸರಕಾರದ ಮುಂದಿರಿಸಿದ ಬೇಡಿಕೆಗಳ ಬಗ್ಗೆ ಅಗೋಸ್ತ್ ೧೪ರಂದು ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದವು. ಸಚಿವರಿಂದ ತಮಗೆ  ಯಾವುದೇ ರೀತಿಯ ಭರವಸೆ ದೊರಕಿಲ್ಲ. ಆ ಕಾರಣದಿಂದಾಗಿ ನಾಳೆ ಬಸ್ ಮುಷ್ಕರ ತೀರ್ಮಾನದೊಂದಿಗೆ ಮುಂದಕ್ಕೆ ಸಾಗುವ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಕಾನ್ಫಡೆರೇಷನ್ ಅಧಕ್ಷ ಲಾರೆನ್ಸ್ ಬಾಬು ತಿರುವನಂತಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳೂ  ಸೇರಿದಂತೆ ಎಲ್ಲಾ ಪ್ರಯಾಣದರ ಹೆಚ್ಚಿಸಬೇಕು, ಹೆಚ್ಚಿಸಲಾದ ರಸ್ತೆ ತೆರಿಗೆ ಮತ್ತು ವಿಮಾ ಕಂತನ್ನು ಹಿಂತೆಗೆದುಕೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆಯೆಂದು ಅವರು ತಿಳಿಸಿದ್ದಾರೆ.  ಆದರೆ ಇದೇ ಸಂದರ್ಭದಲ್ಲಿ ಬಸ್ ಪ್ರಯಾಣದರ ಹೆಚ್ಚಿಸುವ   ಬೇಡಿಕೆಗೆ ಅನುಕೂಲಕರ ತೀರ್ಮಾನದ ಬಗ್ಗೆ ಶೀಘ್ರ ಚರ್ಚೆ ನಡೆಸಲಾಗುವುದೆಂದು ಸರಕಾರದಿಂದ ಭರವಸೆ ಲಭಿಸಿದ್ದು ಆ ಹಿನ್ನೆಲೆಯಲ್ಲಿ ನಾಳೆಯ ಮುಷ್ಕರದಲ್ಲಿ ತಮ್ಮ ಸಂಘಟನೆ ಪಾಲ್ಗೊಳ್ಳುವುದಿಲ್ಲವೆಂದು ಬಸ್ ಆಪರೇಟರ್ಸ್ ಅಸೋಸಿಯೇಶನ್ ಕೋ-ಓರ್ಡಿನೇಷನ್ ಪ್ರಧಾನ ಕಾರ್ಯದರ್ಶಿ ಟಿ. ಗೋಪಿನಾಥನ್ ಸ್ಪಷ್ಟಪಡಿಸಿದ್ದಾರೆ.

NO COMMENTS

LEAVE A REPLY