ಮದ್ಯ, ಬೈಕ್ ಉಪೇಕ್ಷಿಸಿ ಪರಾರಿಯಾದ ಇಬ್ಬರ ಸೆರೆ

0
22

ಬದಿಯಡ್ಕ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ಉಪೇಕ್ಷಿಸಿ ಪರಾರಿಯಾದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಪೆರ್ಮುದೆ ನಿವಾಸಿಗಳಾದ ವಿಷುಕುಮಾರ್ (೨೬), ಸಂದೇಶ್ (೨೧) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.  ಈತಿಂಗಳ ೧೩ರಂದು ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ನಿರ್ಮಿತ ೧೮೦ ಮಿಲ್ಲಿಯ ೯೬ ಬಾಟ್ಲಿ ಮದ್ಯವನ್ನು ಬದಿಯಡ್ಕ ಪೊಲೀಸರು ಬಾಡೂರು ಬಳಿಯ ಅಜ್ಜಿಕುಮೇರ್ ಎಂಬಲ್ಲಿಂದ ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡೊಡನೆ ಬೈಕ್‌ನಲ್ಲಿದ್ದ ಇಬ್ಬರು ಮದ್ಯ ಹಾಗೂ ಬೈಕ್ ಉಪೇಕ್ಷಿಸಿ ಪರಾರಿಯಾಗಿದ್ದರು. ಬೈಕ್‌ನ ನಂಬ್ರವನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಮದ್ಯ ಸಾಗಿಸಿದವರ ಮಾಹಿತಿ ಲಭಿಸಿತ್ತು. ನಿನ್ನೆ ಇವರನ್ನು ಪೆರ್ಮುದೆಯಿಂದ ಬಂಧಿಸಲಾಗಿದೆ.

NO COMMENTS

LEAVE A REPLY