ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆ ೩೦೦ ಗ್ರಾಂ ಗಾಂಜಾ ಸಹಿತ ಇಬ್ಬರ ಸೆರೆ

0
20

ಕಾಸರಗೋಡು: ಓಣಂ ಋತು ಆರಂಭಗೊಂಡಿರುವಂತೆಯೇ ಹೊರ ರಾಜ್ಯಗಳಿಂದ ಕೇರಳಕ್ಕೆ ಅಕ್ರಮ ಮದ್ಯ, ಗಾಂಜಾ ಇತ್ಯಾದಿ ಮಾದಕ ದ್ರವ್ಯಗಳ ಸಾಗಾಟ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಓಣಂ ಸ್ಪೆಷಲ್ ಡ್ರೈವ್ ಎಂಬ ಹೊಸ ಕಾರ್ಯಾಚರಣೆ ಆರಂಭಿಸಿದೆ.

ಅದರಂತೆ ಅಬಕಾರಿ ತಂಡ ನಿನ್ನೆ ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೩೦೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿ ದೆ. ಈ ಸಂಬಂಧ ಹಳೆ ಬಸ್ ನಿಲ್ದಾಣ ಪರಿಸರದ ವ್ಯಾಪಾರಿ ಬಿ. ಯು. ಅಬೂಬಕ್ಕರ್(೫೬) ಮತ್ತು ಹೊರ ರಾಜ್ಯ ಕಾರ್ಮಿಕನಾದ ಪಶ್ಚಿಮ ಬಂಗಾಳದ ತಕ್‌ಬೂರ್ ಬಿಶ್ವಾಸ್ (೩೨) ಎಂಬಿವರನ್ನು ಬಂಧಿಸಲಾಗಿದೆ.

ಅಬಕಾರಿ ಇನ್‌ಸ್ಪೆಕ್ಟರ್ ಟಿ. ರಂಜಿತ್ ಬಾಬುರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.  ಇಂತಹ ಕಾರ್ಯಾಚರಣೆಯನ್ನು ಇನ್ನೂ ಮುಂದುವರಿಸಲಾಗುವುದು. ಗಡಿ ಪ್ರದೇಶಗಳಲ್ಲೇ ಹೆಚ್ಚಾಗಿ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಅಕ್ರಮ ಮದ್ಯ ಮತ್ತು ಗಾಂಜಾ ಇತ್ಯಾದಿ ಸಾಗಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY