ನವನವವಧು ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ವಧು ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

0
414

ಕಾಸರಗೋಡು: ನವವಧು ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉದುಮ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಉದುಮ ಬಾರಾ ಮುಕ್ಕುನ್ನೋತ್ತ್ ಕಾವು ಹೌಸ್‌ನ ಗಲ್ಫ್ ಉದ್ಯೋಗಿ ಬಿಜು.ಬಿ ಎಂಬವರ ಪತ್ನಿ ಹಾಗೂ ಮೂಲ ತಃ ಕಾಸರಗೋಡು ನೆಲ್ಲಿಕುಂಜೆ ಕುಂಡುವಳಪ್ಪು ಹೌಸ್‌ನ ಅಚ್ಯುತನ್-ಜಾನಕಿ ದಂಪತಿಯ ಪುತ್ರಿಯಾದ ಶ್ರೀಲತಾ (೨೬) ಸಾವನ್ನಪ್ಪಿದ ಯುವತಿಯಾಗಿದ್ದಾಳೆ.

ಮನೆ ಪಕ್ಕದ ಖಾಸಗಿ ವ್ಯಕ್ತಿಯೋ ರ್ವರ ಹಿತ್ತಿಲ ಬಾವಿಯಲ್ಲಿ  ಶ್ರೀಲತಾಳ ಮೃತದೇಹ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಈಕೆ ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದಳೆಂದೂ, ಆಕೆಗಾಗಿ ಹುಡುಕಾಡಿದಾಗ ಪಕ್ಕದ ಹಿತ್ತಿಲ ಬಾವಿಯಲ್ಲಿ ಇಂದು ಬೆಳಿಗ್ಗೆ   ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದ ಬೇಕಲ ಪೊಲೀಸರು  ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಬಳಿಕ  ಅವರು ನೀಡಿದ ಮಾಹಿತಿಯಂತೆ ಲೀಡಿಂಗ್ ಫಯರ್ ಮ್ಯಾನ್ ಸತೀಶನ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳದವರು ಸಂಭವ ಸ್ಥಳಕ್ಕಾಗಮಿಸಿ, ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿ ಪೊಲೀಸರಿಗೆ ಹಸ್ತಾಂತರಿಸಿದರು. ಬಳಿಕ ಪೊಲೀಸರು ಮೃತದೇಹವನ್ನು ಜಿಲ್ಲಾ ಸರಕಾರಿ  ಆಸ್ಪತ್ರೆಗೆ ಸಾಗಿಸಿದರು. ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

೨೦೧೫ ಜನವರಿ ೨೧ರಂದು ಶ್ರೀಲತಾ  ಮದುವೆ ಬಿಜುವಿನ ಜೊತೆ ನಡೆದಿತ್ತು ಮದುವೆ ಬಳಿಕ ಬಿಜು ಗಲ್ಫ್‌ಗೆ

NO COMMENTS

LEAVE A REPLY