ಬ್ಯಾಂಕ್ ದರೋಡೆ ಆರೋಪಿ ಮುಜೀಬ್ ಖರೀದಿಸಿದ ಕಾರು, ಸ್ಥಳದ ಮಾಲಕರ ಪತ್ತೆ

0
366

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನೋರ್ವನಾದ ಬಂದ್ಯೋಡು ನಿವಾಸಿ ಮುಜೀಬ್ ಎಂಬಾತನನ್ನು ಕರ್ನಾಟಕದ ವಿರಾಜಪೇಟೆ ಸಹಿತ ವಿವಿಧೆಡೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದ ಬಳಿಕ ಪೊಲೀಸರು ಕಾಸರಗೋ ಡಿಗೆ ಮರಳಿದ್ದಾರೆ. ದರೋಡೆ ಬಳಿಕ ಕರ್ನಾಟಕಕ್ಕೆ ಪಲಾಯನಗೈದ ಆರೋಪಿ ಮುಜೀಬ್ ವಿರಾಜಪೇಟೆಯಲ್ಲಿ ೨.೯೦ ಲಕ್ಷ ರೂ. ನೀಡಿ ಖರೀದಿಸಿದ ಕಾರಿನ ಮಾಲಕ ಹಾಗೂ ೪ ಲಕ್ಷ ರೂ. ನೀಡಿ ಖರೀದಿಸಿದ ಸ್ಥಳದ ಮಾಲಕನನ್ನು ಈ ವೇಳೆ ಪತ್ತೆಹಚ್ಚಲಾಯಿತು. ಕಾರು ಹಾಗೂ ಸ್ಥಳದ ಮಾಲಕರನ್ನು ಮುಜೀಬ್ ತೋರಿಸಿಕೊ ಟ್ಟಿದ್ದಾನೆ. ಮುಜೀಬ್ ನೀಡಿದ ಹಣವನ್ನು ತಾವು ಮರಳಿ ನೀಡುವುದಾಗಿ ಆ ಇಬ್ಬರು ತಿಳಿಸಿದ್ದಾರೆ.

ಮುಜೀಬ್ ವಾಸಿಸುತ್ತಿದ್ದ ಸ್ಥಳಕ್ಕೆ ಆತನನ್ನು  ಕರೆದೊಯ್ದು  ಶೋಧ ನಡೆಸಿದಾಗ ಅಲ್ಲಿ ೨೫ ಸಾವಿರ ರೂ.ಗಳನ್ನು ಪತ್ತೆಹಚ್ಚಲಾಯಿತು. ಒಂದು ಪವನ್ ಚಿನ್ನವನ್ನು ಆತ ಅಲ್ಲಿ ಅಡವಿರಿಸಿದ್ದು ಅದನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿದೆ.

ನಾಲ್ಕುತಿಂಗಳ ಹಿಂದೆ ಕುಂಬಳೆಯಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರು ನಿಲ್ಲಿಸಲು ಸೂಚಿಸಿದರೂ ಸ್ಕೂಟರ್ ವೊಂದು ನಿಲ್ಲಿಸದೆ ಪರಾರಿಯಾಗಿತ್ತು. ಕೂಡಲೇ ಪೊಲೀಸರು ಬೆನ್ನಟ್ಟಿ ಅದನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಆ ಸ್ಕೂಟರ್‌ನಲ್ಲಿದ್ದ ಸಾಬಿರ್ ಹಾಗೂ ಅರ್ಷಾದ್ ಎಂಬಿವರನ್ನು ಬಂಧಿಸಿದ್ದು ಅಲ್ಲದೆ ಅವರ ಕೈಯಲ್ಲಿದ್ದ ಏರ್ ಪಿಸ್ತೂಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಆ ಪಿಸ್ತೂಲ್ ಅವರಿಗೆ ನೀಡಿರುವುದು ಶರೀಫ್ ಎಂಬಾತನೆಂದು ತಿಳಿಸಿದ್ದರು. ಈ ಪೈಕಿ ಸ್ಕೂಟರ್‌ನಲ್ಲಿದ್ದ ಅರ್ಶಾದ್  ಹಾಗೂ ಪಿಸ್ತೂಲ್ ನೀಡಿದ ಶೆರೀಫ್ ಎಂಬಿವರು ಕೂಡ್ಲು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆ. ಬ್ಯಾಂಕ್ ದರೋಡೆ ಪ್ರಕರಣದ ಓರ್ವ ಆರೋಪಿಗೆ ಇನ್ನೋರ್ವ ಆರೋಪಿ ಏರ್ ಪಿಸ್ತೂಲು ನೀಡಿರುವುz ರಿಂದ ಈ ದರೋಡೆ ತಂಡ ದರೋಡೆ ವೇಳೆ ಅಗತ್ಯವಿದ್ದರೆ ಕೊಲೆ ನಡೆಸಲೂ ಯೋಜನೆಯಿರಿಸಿತ್ತೆಂದು ತಿಳಿದುಬರುತ್ತಿದೆ ಯೆಂದು  ಪೊಲೀಸರು ಹೇಳತ್ತಿದ್ದಾರೆ.

NO COMMENTS

LEAVE A REPLY