ವಾಹನ ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ದೇಲಂಪಾಡಿ, ಗಾಳಿಮುಖ ಪರಿಸರದಲ್ಲಿ ಶೋಕಸಾಗರ

0
27

ಮುಳ್ಳೇರಿಯ: ಅತ್ತನಾಡಿ ಸೇತುವೆ ಬಳಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಎಸ್.ಎಸ್.ಎಫ್ ಕಾರ್ಯಕರ್ತರಾದ ಇಬ್ಬರು ಯುವಕರು ಮೃತಪಟ್ಟ ಘಟನೆಯಿಂದ ದೇಲಂಪಾಡಿ, ಗಾಳಿಮುಖ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ.

ದೇಲಂಪಾಡಿ ಮಯ್ಯಾಳ ಬಳಿಯ ಪಂಚೋಡಿ ಎಂಬಲ್ಲಿನ ಇಬ್ರಾಹಿಂ ಎಂಬ ವರ ಪುತ್ರ ಸಾಬಿರ್ (೨೨), ಗಾಳಿಮುಖ ಬಳಿಯ ಕರ್ನೂರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಇರ್ಶಾದ್ (೨೨) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿ ದ್ದಾರೆ.  ಇವರು ಸಂಚರಿಸಿದ ಬೈಕ್ ಹಾಗೂ ಶಾಲಾ ಬಸ್ ಢಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಏಣಿಯಡಿ ಎಂಬಲ್ಲಿ ನಡೆದ ಎಸ್‌ಎಸ್‌ಎಫ್ ಜಿಲ್ಲಾ ಸಾಹಿತ್ಯೋತ್ಸವ ಕ್ಕೆಂದು ಇವರು ನಿನ್ನೆ ಸಂಜೆ ೫.೩೦ರ ವೇಳೆ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಇವರು ಸಂಚರಿಸಿದ ಬೈಕ್ ಹಾಗೂ ಶಾಲಾ ಬಸ್ ಅತ್ತನಾಡಿ ಸೇತುವೆ ಬಳಿ ಪರಸ್ಪರ ಢಿಕ್ಕಿ ಹೊಡೆದಿದೆ. ಅಪಘಾತ ಅರಿತು ಸ್ಥಳಕ್ಕೆ ತಲುಪಿದ ಸ್ಥಳೀಯರು ಬಸ್‌ನಡಿ ಸಿಲುಕಿದ್ದ ಇರ್ಶಾದ್ ಹಾಗೂ ಸಾಬಿರ್‌ರನ್ನು ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಇವರ ಸಾವು ಸಂಭವಿಸಿದೆ. ಸಾಬಿರ್ ಎಸ್‌ಎಸ್‌ಎಫ್ ದೇಲಂ ಪಾಡಿ ಸೆಕ್ಟರ್ ಸೆಕ್ರೆಟರಿ, ಇರ್ಶಾದ್ ಪಳ್ಳಂ ಗೋಡು ಸೆಕ್ಟರ್ ಸೆಕ್ರೆಟ ರಿಯಾಗಿದ್ದಾರೆ.

ಮೃತ ಸಾಬಿರ್ ತಂದೆ, ತಾಯಿ ಖದೀಜ, ಸಹೋದರ-ಸಹೋದರಿ ಯರಾದ ಸಾಹಿರ್, ಉಮೈರ್, ಸುಫೈಲ್, ಸಫೀದ, ಸಂಫೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇದೇ ರೀತಿ ಇರ್ಶಾದ್ ತಂದೆ, ತಾಯಿ ಅಸ್ಮಾ, ಸಹೋದರರಾದ ಸಅದ್, ಸವಾದ್, ಸಫ್ವಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಾಬಿರ್ ಹಾಗೂ ಇರ್ಶಾದ್‌ರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಳಂಗರೆ ಮಾಲಿಕ್ ದೀನಾರ್ ಮಸೀದಿಗೆ ಕೊಂಡೊಯ್ಯಲಾಗುವುದು. ಅನಂತರ ಊರಿಗೆ ಕೊಂಡೊಯ್ದು ಸಾಬಿರ್‌ರ ಮೃತದೇಹವನ್ನು ಮಯ್ಯಾಳ ಮುಹಿಯುದ್ದೀನ್ ಮಸೀದಿಯಲ್ಲೂ, ಇರ್ಶಾದ್‌ರ ಮೃತದೇಹವನ್ನು ಕರ್ನೂರು ಕಿಳಕ್ಕೇ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

NO COMMENTS

LEAVE A REPLY