ಬೈಕ್ ಢಿಕ್ಕಿಹೊಡೆದು ಪಾದಚಾರಿ ಗಂಭೀರ: ಸವಾರನ ವಿರುದ್ಧ ಕೇಸು

0
99

ಮಂಜೇಶ್ವರ: ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಂಬಂಧ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉತ್ತರ ಪ್ರದೇಶ ನಿವಾಸಿ, ಮೊರತ್ತಣೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಲ್ಯುಮೀನಿಯಂ ಫ್ಯಾಬ್ರಿಕ್ಸ್ ಕಾರ್ಮಿಕ ರೋಹಿತ್ (೨೭) ಎಂಬವರ ದೂರಿನಂತೆ ಬೈಕ್ ಸವಾರನ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೨೧ರಂದು ಸಂಜೆ ೫.೩೦ರ ವೇಳೆ ಮೊರತ್ತಣೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದಿದೆ. ಗಾಯಗೊಂಡ ರೋಹಿತ್ ಮಂಗಳೂರಿನ ಐಲೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.

NO COMMENTS

LEAVE A REPLY