ಕಾರು-ಆಟೋ ರಿಕ್ಷಾ ಡಿಕ್ಕಿ: ಓರ್ವನಿಗೆ ಗಾಯ

0
30

ಕುಂಬಳೆ: ಕಾರು ಹಾಗೂ ಆಟೋ ರಿಕ್ಷಾ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಾಯಗೊಂಡಿದ್ದಾರೆ. ಶಿರಿಯಾ ಬಂಗಾರ ಹೌಸ್‌ನ ಚಂದ್ರಹಾಸ (೪೫) ಎಂಬವರು ಗಾಯಗೊಂಡಿದ್ದು, ಕುಂಬಳೆಯ ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾರೆ. ಮೊನ್ನೆ ರಾತ್ರಿ ಶಿರಿಯಾ ಕುನ್ನಿಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಪ್ರಯಾಣಿಕರಾದ ಚಂದ್ರಹಾಸ ಹೊರಕ್ಕೆಸೆಯಲ್ಪಟ್ಟು ತಲೆಗೆ ಗಾಯಗಳಾಗಿವೆ. ಅಪಘಾತ ಸಂಬಂಧ ಕಾರು ಚಾಲಕನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY