ಉಪ್ಪಳ ಶಾಂತ: ಮೂವರ ಸೆರೆ;ನಿಷೇಧಾಜ್ಞೆ, ಪೊಲೀಸ್ ಬಂದೋಬಸ್ತ್ ಮುಂದುವರಿಕೆ

0
492
Exif_JPEG_420

ಉಪ್ಪಳ: ರಾಜಕೀಯ ಗಲಭೆಗ್ರಸ್ತ ಉಪ್ಪಳ ಪರಿಸರ ಪ್ರದೇಶದಲ್ಲಿ ಶಾಂತಿ ನೆಲೆಸಿದ್ದು, ಗಲಭೆಗೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯುಂ ಟುಮಾಡಿದ ರೀತಿಯಲ್ಲಿ ಮೆರವಣಿಗೆ ನಡೆಸಿದ ಐಕ್ಯರಂಗ ಕಾರ್ಯಕರ್ತರ ವಿರುದ್ಧ  ಹಾಗೂ ಗುಂಪು ಸೇರಿದರೆಂದು  ಇತರ ಐವರ ವಿರುದ್ಧ ಕೇಸು ದಾಖಲಿಸ ಲಾಗಿದೆ. ವ್ಯಾಪಾರ  ಸಂಸ್ಥೆಗಳೆಲ್ಲವೂ ಇಂದು  ಬಾಗಿಲು ತೆರೆದು ಕಾರ್ಯಾ ಚರಿಸುತ್ತಿವೆ. ಪರಿಸರ ಪ್ರದೇಶಗಳಲ್ಲಿ ಪೊಲೀಸರ ಬಿಗು ಬಂದೋಬಸ್ತ್ ಹಾಗೂ  ನಿಷೇಧಾಜ್ಞೆ ಮುಂದುವರಿದಿದೆ.

ಮುಸ್ಲಿಂ ಲೀಗ್‌ನ ಕಾರ್ಯಕರ್ತ ಪಚ್ಲಂಪಾರೆಯ ಮಹಮ್ಮದ್ ಮುನೀರ್ (೨೫), ಬಿಜೆಪಿ ಕಾರ್ಯಕರ್ತರಾದ ಜೋಡುಕಲ್ಲಿನ ಲೋಕೇಶ್ (೨೯), ಉಪ್ಪಳ ಮೊಗವೀರಪಟ್ಣದ ರಾಜ ಯಾನೆ ರಾಜೇಶ (೪೦) ಬಂಧಿತರು. ಮೊನ್ನೆ ಉಪ್ಪಳ ಪೇಟೆಯಲ್ಲಿ ಕಲ್ಲು ತೂರಾಟ, ಹಲ್ಲೆ ಇತ್ಯಾದಿ ಕೃತ್ಯವೆಸಗಿದರೆಂದು ಕೇಸು ದಾಖಲಿಸಲಾಗಿತ್ತು. ಪ್ರಕರಣದಲ್ಲಿ  ಎರಡೂ ಪಕ್ಷಗಳ ೧೦೦ರಷ್ಟು  ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದು, ಮಿಕ್ಕವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  ವ್ಯಾಪಾರ ಸಂಸ್ಥೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಯೆಸಗಿದುದನ್ನು ಪ್ರತಿಭಟಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನಿನ್ನೆ ನಡೆಸಿದ ಹರತಾಳ ಪೂರ್ಣಗೊಂಡಿತ್ತು. ಇಂದು ಅಂಗಡಿಗಳೆಲ್ಲವೂ ಎಂದಿನಂತೆ ತೆರೆದು ಕಾರ್ಯಾಚರಿಸುತ್ತಿವೆ

ಸಾರ್ವಜನಿಕರಿಗೆ ತೊಂದg ಯುಂಟುಮಾಡುವ ರೀತಿಯಲ್ಲಿ ಮೆರವಣಿಗೆ ನಡೆಸಿದ ಆರೋಪದಲ್ಲಿ ಜಿ.ಪಂ. ಸದಸ್ಯ ಸಹಿತ ೧೦೦ಕ್ಕೂ ಮಿಕ್ಕ ಐಕ್ಯರಂಗ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಸುಧಾಕರ, ಅಬ್ದುಲ್ ಮಜೀದ್,  ಉಮ್ಮರ್ ವರ್ಕಾಡಿ, ಮಜಲ್ ಮಹಮ್ಮದ್, ಮೂಸಾ ಕೆದುಂಬಾಡಿ ಸೇರಿದಂತೆ ಕಂಡರೆ ಗುರುತುಪತ್ತೆಹಚ್ಚಬಹು ದಾದ ೧೦೦ ಮಂದಿ ವಿರುದ್ದ ಕೇಸು ದಾಖಲಿಸಲಾಗಿದೆ. ಮೊನ್ನೆ ಸಂಜೆ ವರ್ಕಾಡಿಯ ಸುಂಕದಕಟ್ಟೆಯಲ್ಲಿ ಬೈಕ್ ಹಾಗೂ ಇತರ ವಾಹನಗಳಲ್ಲಿ ಮೆರವಣಿಗೆ  ನಡೆಸಿ ರಸ್ತೆ ತಡೆ ನಿರ್ಮಿಸಿದರೆಂದೂ, ನಾಗರಿಕರಿಗೆ ಸಂಕಷ್ಟವುಂಟುಮಾಡಿದರೆಂದು ಇವರ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕುಂಜತ್ತೂರು ಮಸೀದಿ ಬಳಿ ಗುಂಪು ಸೇರಿದರೆಂದು ಆರೋಪಿಸಿ ಶೈಲೇಶ್, ಕಿರಣ್, ಶೋಬಿ ತ್, ರಾಜು, ಕುಟ್ಟ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕುಂಜತ್ತೂ ರುಪದವು ಇಬ್ರಾಹಿಂರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

 

NO COMMENTS

LEAVE A REPLY