ಹಳದಿ ಕಾಮಾಲೆ ಜ್ವರ ವಿದ್ಯಾರ್ಥಿನಿ ಮೃತ್ಯು

0
1336

ಕಾಸರಗೋಡು: ಹಳದಿ ಕಾಮಾಲೆ ಜ್ವರ ತಗಲಿ ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಹೊಸದುರ್ಗ ವೇಲಾಶ್ವರಂ ಪಾಣಂ ತೊಟ್ಟಕೆಯ ವಿ. ಬಾಲಕೃಷ್ಣನ್ – ಲಕ್ಷ್ಮೀ ದಂಪತಿ ಪುತ್ರಿ ಸೌಮ್ಯ (೨೦) ಸಾವನ್ನಪ್ಪಿದ ಯುವತಿ ಯಾಗಿದ್ದಾಳೆ. ಈಕೆ ಕಾಸರಗೋಡು ಸರಕಾರಿ ಕಾಲೇಜಿನ ಅಂತಿಮ ವರ್ಷ ಬಿ.ಎ. ವಿದ್ಯಾರ್ಥಿನಿ ಯಾಗಿ ದ್ದಾಳೆ. ಜ್ವರ ತಗಲಿದ ಆಕೆಗೆ ಮಂಗ ಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗಿತ್ತು. ಆದರೆ ಅದು ಫಲಕಾರಿ ಯಾಗದೆ ಆಕೆ ನಿಧನ ಹೊಂದಿದ್ದಾಳೆ. ಮೃತಳು ಹೆತ್ತವರ ಹೊರತಾಗಿ ಸಹೋದರ ನಿಧೀಶ್ ಹಾಗೂ ಅಪಾರ ಬಂಧುಗಳ ನ್ನು ಅಗಲಿದ್ದಾರೆ.

NO COMMENTS

LEAVE A REPLY