ಜಿಲ್ಲೆಯ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜ್ಯಾರಿ

0
491

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಜಿಲ್ಲೆಯ ಹಲವೆಡೆಗಳಲ್ಲಿ ತಲೆಯೆತ್ತಿದ ಅಹಿತಕರ ಘಟನೆಗಳು ಇನ್ನೂ ತಣಿಯದೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಾ. ಎ. ಶ್ರೀನಿವಾಸ್ ನಿಷೇಧಾಜ್ಞೆ ಘೋಷಿಸಿದ್ದಾರೆ. ಇದರಂತೆ ಮಂಜೇಶ್ವರ, ಕುಂಬಳೆ, ಬದಿಯಡ್ಕ,  ಬೇಕಲ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ನವೆಂಬರ್ ೧೧ರ ತನಕ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದೆ.

ಹೊಸದುರ್ಗದಲ್ಲಿ ಬಿಜೆಪಿ ಕಛೇರಿ ಮತ್ತು ಅರುವಿಕ್ಕೆರೆಯಲ್ಲಿ ಸಿಪಿಎಂ ಶಾಖಾ ಕಾರ್ಯದರ್ಶಿ ನಿವಾಸದ ಮೇಲೆ ನಿನ್ನೆ ಆಕ್ರಮಣ ಉಂಟಾಗಿದೆ. ಬಲ್ಲಾ ಕಡಪ್ಪುರದ ಸಿಪಿಎಂ ಕಾರ್ಯಕರ್ತರೋರ್ವರ ಮನೆ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್‌ನ್ನು ಅಕ್ರಮಿಗಳು ಹಾನಿಗೆಡಹಿ ಸಮುದ್ರಕ್ಕೆ ತಳ್ಳಿ ಹಾಕಿದ್ದಾರೆ.  ಮೀನುಗಾರಿಕೆಯ ದೋಣಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸೀಮೆಎಣ್ಣೆಯನ್ನು ವ್ಯಾಪಕವಾಗಿ ಮಗುಚಿ ಹಾಕಿ ನಾಶಗೊಳಿಸಲಾಗಿದೆ. ಉಪ್ಪಳದಲ್ಲಿ ಮುಸ್ಲಿಂ ಲೀಗ್ ಮತ್ತು ಬಿಜೆಪಿ ಮಧ್ಯೆ ಘರ್ಷಣೆ ಉಂಟಾದರೆ, ಬೇಕಲ ಮತ್ತು ಹೊಸದುರ್ಗದಲ್ಲಿ ಬಿಜೆಪಿ ಮತ್ತು ಸಿಪಿಎಂ ಮಧ್ಯೆ ಘರ್ಷಣೆ ತಲೆಯೆತ್ತಿದೆ. ಈ ಎಲ್ಲಾ ಘರ್ಷಣೆಗಳಲ್ಲಾಗಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದು, ಹಲವು ಮನೆಗ ಳು, ವ್ಯಾಪಾರ ಸಂಸ್ಥೆಗಳು, ಪಕ್ಷದ ಕಚೇರಿಗಳು ಮತ್ತು ವಾಹನಗಳಿಗೂ ವ್ಯಾಪಕ ಹಾನಿ ಉಂಟಾಗಿದೆ.

NO COMMENTS

LEAVE A REPLY