ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರ ದರ್ಶನಕ್ಕೆ ಅನುಮತಿ ಕೋರಿ ಜೇಸುದಾಸ್ ಪತ್ರ: ತೀರ್ಮಾನ ಇಂದು

0
47

ತಿರುವನಂತಪುರ: ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿ ದೇಗುಲ ದರ್ಶನಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಗಾನಗಂಧರ್ವ ಕೆ.ಜೆ. ಜೇಸು ದಾಸ್  ಶ್ರೀ ಕ್ಷೇತ್ರದ ಆಡಳಿತಸಮಿತಿಗೆ ಪತ್ರ ಕಳುಹಿಸಿಕೊಟ್ಟಿದ್ದಾರೆ.

ಆಡಳಿತ ಸಮಿತಿಯ ಸಭೆ ಇಂದು ಸೇರಲಿದ್ದು, ಅದರಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.  ಶ್ರೀ ಪದ್ಮನಾಭ ಸ್ವಾಮಿ ಕ್ಷೇತ್ರಕ್ಕೆ ಈಗ ಹಿಂದು ಗಳಿಗೆ ಮಾತ್ರವೇ ಪ್ರವೇಶ ನೀಡಲಾಗುತ್ತಿದೆ. ತಾನು ಹಿಂದೂ ಧರ್ಮದಲ್ಲಿ ನಂಬುಗೆಯುಳ್ಳವನು. ದೇವಸ್ಥಾನಗಳ ಎಲ್ಲಾ ಆಚರಣೆಗಳನ್ನು ಪಾಲಿಸುತ್ತಿದ್ದೇನೆಂದು ಪತ್ರದಲ್ಲಿ ಜೇಸುದಾಸ್ ತಿಳಿಸಿದ್ದಾರೆ.

ಇದೇ ವೇಳೆ ದೇವರಲ್ಲಿ ನಂಬುಗೆ ಇರುವ ಎಲ್ಲರಿಗೂ ಕ್ಷೇತ್ರದರ್ಶನಕ್ಕೆ ಅನುಮತಿ ನೀಡಬೇಕೆಂದು ರಾಜ್ಯ ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಅಭಿಪ್ರಾಯಪಟ್ಟಿದ್ದಾರೆ.

ಜೇಸುದಾಸ್‌ರಂತಹ ಭಕ್ತರಿಗೆ ಶ್ರೀ ಪದ್ಮನಾಭಸ್ವಾಮಿ ಕ್ಷೇತ್ರದರ್ಶನಕ್ಕೆ ಅನುಮತಿ ನೀಡಬೇಕೆಂದು ಸಿನಿಮಾ ನಟ, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರವಾಗಿದೆಯೆಂದೂ ಅವರು ಸ್ಪಷ್ಟಪಡಿಸಿದ್ದಾರೆ.

NO COMMENTS

LEAVE A REPLY