ಕಾಸರಗೋಡಿನ ಬಾಲಕನಿಗೆ ಸಲಿಂಗರತಿ ಕಿರುಕುಳ: ಉಸ್ತಾದ್, ಸಹಾಯಕ ಸೆರೆ

0
44

ಕಾಸರಗೋಡು: ಕಾಸರಗೋಡು ನಿವಾಸಿಯಾಗಿರುವ ಹದಿಮೂರರ ಹರೆಯದ ಮದ್ರಸ ವಿದ್ಯಾರ್ಥಿಗೆ ಸಲಿಂಗರತಿ  ಕಿರುಕುಳ ನೀಡಿದ ಬಗ್ಗೆ ಮದ್ರಸ ಅಧ್ಯಾಪಕ ಸೇರಿದಂತೆ ಇಬ್ಬರನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದಾರೆ.

ಪಯ್ಯನ್ನೂರು ಪೆರುಂಬ ಬಳಿಯ ಮಸೀದಿಯೊಂದರ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಮದ್ರಸದ ಉಸ್ತಾದ್ ಮಾಟ್ಟುಲ್ ನೋರ್ತ್ ಅಂಚೆ ಕಚೇರಿ ಬಳಿಯ ನಿವಾಸಿ ವಿ.ಪಿ. ಸೈದ್ (೨೮) ಮತ್ತು   ಮದ್ರಸದ ಅಡುಗೆಕಾರ್ಮಿಕ ತಳಿಪರಂಬ ವಾಯೋಟು ತಿರುವೆಟ್ಟೂರಿನ ಎಂ.ಕೆ. ಸಿದ್ದಿಕ್ (೩೧) ಬಂಧಿತ ಆರೋಪಿ ಗಳಾಗಿದ್ದಾರೆ.   ಮದ್ರಸದಲ್ಲಿ  ಕಲಿಯು ತ್ತಿರುವ ಕಾಸರಗೋಡು ನಿವಾಸಿಯಾದ ಬಾಲಕನಿಗೆ ಕಳೆದ ಜೂನ್‌ನಲ್ಲಿ ಸಲಿಂಗರತಿ   ಕಿರುಕುಳ ನೀಡಿದ ದೂರಿನಂತೆ ಈ ಇಬ್ಬರು ಆರೋ ಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಬಗ್ಗೆ ಚೈಲ್ಡ್ ಲೈನ್ ಕಾರ್ಯಕರ್ತರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಚೈಲ್ಡ್ ಲೈನ್ ನೀಡಿದ ದೂರಿನಂತೆ ಪೊಲೀಸರು ತನಿ ಖೆ ನಡೆಸಿ ಆರೋಪಿಗಳನ್ನು ಬಂಧಿಸಿ ದ್ದಾರೆ. ಕಿರುಕುಳಕ್ಕೊಳಗಾದ ವಿದ್ಯಾರ್ಥಿ ಯೂ ಪೊಲೀಸರಿಗೆ ದೂರು ನೀಡಿದ್ದನು.

NO COMMENTS

LEAVE A REPLY