ಅಕ್ರಮ ಮರಳು ಸಾಗಾಟ,ಗಾಂಜಾ ಮಾರಾಟಗಾರರು ‘ಕಾಪಾ’ ವ್ಯಾಪ್ತಿಗೆ:ಐದು ಮಂದಿ ಸೇರ್ಪಡೆಗೆ ಶಿಫಾರಸು

0
18

ಕಾಸರಗೋಡು: ಕೇರಳ ಆಂಟಿ ಸೋಶ್ಯಲ್ ಆಕ್ಟಿವಿಟೀಸ್ ಪ್ರಿವೆನ್ಶನ್ ಆಕ್ಟ್ ವ್ಯಾಪ್ತಿಯಲ್ಲಿ ಇನ್ನು ಜಿಲ್ಲೆಯ ಅಕ್ರಮ ಮರಳುಗಾರಿಕೆ, ಸಾಗಾಟ ಮತ್ತು ಚಿಲ್ಲರೆ ಮತ್ತು ರಖಂ ಗಾಂಜಾ ಮಾರಾಟಗಳನ್ನು ಒಳಪಡಿಸಲಾಗುವುದು.

ಇದರಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತನಕ ದಾಖಲಿಸಲಾದ ಅಕ್ರಮ ಹೊಯ್ಗೆ ಸಾಗಾಟ ಮತ್ತು ಗಾಂಜಾ ಸಾಗಾಟ ಪ್ರಕರಣಗಳ ಆರೋಪಿಗಳ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅಂತಹವರ ವಿರುದ್ಧ  ಮೊದಲು ಸೆಕ್ಷನ್ ೧೦೭ ಮತ್ತು ೧೧೦ ರನ್ವಯ ಉತ್ತಮ ನಡತೆಗಿರುವ ಪ್ರಕರಣ ದಾಖಲಿಸಲಾಗುವುದು. ಆಬಳಿಕ ಅವರು ಮತ್ತೆ ಅದೇ ದಂಧೆಯಲ್ಲಿ ಮುಂದುವರಿದಲ್ಲಿ ಅವರ ವಿರುದ್ಧ ‘ಕಾಪಾ’ ಕಾನೂನು ಪ್ರಕgಣ ದಾಖಲಿಸಿ ಸೆರೆಹಿಡಿದು ಜೈಲಿಗಟ್ಟಲಾಗುವುದೆಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಉತ್ತಮ ನಡತೆಗಿರುವ ೧೦೭ ಸೆಕ್ಷನ್ ಪ್ರಕಾರ ಜಿಲ್ಲೆಯಲ್ಲಿ ಈಗಾಗಲೇ ೧೭೪ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಕ್ರಮ ಹೊಯ್ಗೆ ಸಾಗಾಟ ಮತ್ತು ಗಾಂಜಾ ಸಾಗಾಟ ದಂಧೆಯಲ್ಲಿ ಇನ್ನೂ ಮುಂದುವರಿದಲ್ಲಿ ಅವರ ವಿರುದ್ಧ ಕಾಪಾ ಬಳಸಲಾಗುವುದು. ಅದರಂತೆ ಈತಿಂಗಳು ಜಿಲ್ಲೆಯ ಐದು ಮಂದಿ ವಿರುದ್ಧ ಕಾಪಾ ಹೇರಲು ಶಿಫಾರಸ್ಸು ಮಾಡಲಾಗಿದೆ. ಮುಂದೆ ಇದರಲ್ಲಿ ಒಳಪಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಹೊಯ್ಗೆ ಸಾಗಾಟ, ಗಾಂಜಾ ದಂಧೆಯಲ್ಲಿ ತೊಡಗುವವರ ಪೂರ್ಣ ಮಾಹಿತಿಯನ್ನು ಎಲ್ಲಾ  ಪೊಲೀಸ್ ಠಾಣೆಗಳಿಂದ ಸಂಗ್ರಹಿಸಿ ನೀಡುವಂತೆ ಪೊಲೀಸ್ ಗುಪ್ತಚರ ವಿಭಾಗಕ್ಕೂ ಜಿಲ್ಲಾ ಪೊಲೀಸ್ ಅಧಿಕಾರಿ ಈಗಾಗಲೇ ನಿರ್ದೇಶ ನೀಡಿದ್ದಾರೆ. ಇಂತಹ ದಂಧೆಗಳ ಬಗ್ಗೆ ತೀವ್ರ ನಿಗಾ ಇರಿಸಿ ಅದರಲ್ಲಿ ತೊಡಗಿದವರನ್ನು ಸೆರೆಹಿಡಿಯಲು ಶ್ಯಾಡೋ ಪೊಲೀಸರು ಮತ್ತು ಕ್ರೈಂ ಡಿಟೆಕ್ಟೀವ್ ಸ್ಕ್ವಾಡ್‌ಗೆ ಜಿಲ್ಲಾ ಪೊಲೀಸ್ ಅಧಿಕಾರಿ ನಿರ್ದೇಶಿಸಿದ್ದಾರೆ.

ಅಕ್ರಮ ಹೊಯ್ಗೆ ಸಾಗಾಟ ಮತ್ತು ಗಾಂಜಾ ದಂಧೆ ಬಗ್ಗೆ ಸಾರ್ವಜನಿಕರು ಜಿಲ್ಲಾ ಪೊಲೀಸ್ ಅಧಿಕಾರಿಯ ನಿಯಂತ್ರಣದಲ್ಲಿರುವ ೧೦೯೦ ಎಂಬ ಟೋಲ್ ಫ್ರೀ ನಂಬ್ರ ಮೂಲಕ ಮಾಹಿತಿ ನೀಡಬಹುದು.   ಇಂತಹ ದಂಧೆಯಲ್ಲಿ ನಿರತರಾದವರನ್ನು ಸೆರೆಹಿಡಿಯಲು ‘ಆಪರೇಷನ್ ಬ್ಲೂ ಲೈಟ್’ ಎಂಬ ಹೆಸರಿನಲ್ಲಿ ಹೊಸ ಕಾರ್ಯಾಚರಣೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಗಾಂಜಾ, ಹೊಯ್ಗೆ ಸಾಗಾಟದ ಕುರಿತು ಗುಪ್ತ ಮಾಹಿತಿಗಳನ್ನು ಆಪರೇಶನ್ ಬ್ಲೂ ಲೈಟ್ ತಂಡದ ೯೪೯೭೯೭೫೮೨೧ ಎಂಬ ನಂಬ್ರಕ್ಕೆ ಸಾರ್ವಜನಿಕರು ಕರೆಮಾಡಿ ಮಾಹಿತಿ ನೀಡಬಹುದು. ಹೀಗೆ ಗುಪ್ತ ಮಾಹಿತಿ ನೀಡುವವರ ಹೆಸರು ಮತ್ತು ಇತರ ಮಾಹಿತಿಗಳನ್ನು ಗುಪ್ತವಾಗಿ ರಿಸಲಾಗುವುದೆಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

NO COMMENTS

LEAVE A REPLY