ಜನಸಂದಣಿ ಮಧ್ಯೆ ಚಿನ್ನದೊಡವೆ ಎಗರಿಸುವ ತಂಡಗಳು ಮತ್ತೆ ಸಕ್ರಿಯ ಇಬ್ಬರು ಮಹಿಳೆಯರ ಎಂಟು ಪವನ್ ಚಿನ್ನದ ಸರ ಕಳವು

0
23

ಕಾಸರಗೋಡು: ಜನದಟ್ಟಣೆ ಇರುವ ಸ್ಥಳಗಳು ಮತ್ತು ಬಸ್ಸುಗಳಿಗೆ ನುಸುಳಿ ಚಿನ್ನದೊಡವೆಗಳನ್ನು ಎಗರಿ ಸುವ ತಂಡ ಕಾಸರಗೋಡು ಮತ್ತು ಪರಿಸರದಲ್ಲಿ ಮತ್ತೆ ಸಕ್ರಿಯಗೊಂಡಿದೆ.

ಚಟ್ಟಂಚಾಲ್‌ನ ಇಬ್ಬರು ಮಹಿಳೆಯರ ಒಟ್ಟು ಎಂಟು ಪವನ್‌ನ ಚಿನ್ನದೊಡವೆ ಬಸ್ ಪ್ರಯಾಣದ ಮಧ್ಯೆ ಎಗರಿಸಲಾಗಿದೆ. ಉದುಮ ಪಂಚಾಯತ್ ಸದಸ್ಯೆ ಮೈಲಾಟಿ ಅಡ್ಕತ್ತಬೈಲಿನ ಕಮಲಾಕ್ಷಿ ಮತ್ತು ಅಡ್ಕತ್ತಬೈಲು ಪೂಕುನ್ನದ ಎ. ಉಮಾವತಿ ಎಂಬವರ ಚಿನ್ನದ ಸರಗಳು ಬಸ್ಸಿನೊಳಗಿನಿಂದಲೇ ಈ ರೀತಿ ಎಗರಿಸಲಾಗಿದೆ. ಉಮಾವತಿ ಚೆಮ್ನಾಡಿನಲಿ ರುವ ಸಹೋದರಿ ಮನೆಗೆ ತೆರಳಲು   ಚಟ್ಟಂಚಾಲ್‌ನಿಂದ ಬಸ್ಸೇರಿದ್ದರು. ದಾರಿ ಮಧ್ಯೆ ಅವರ ಮೂರೂವರೆ ಪವನ್‌ನ ಕರಿಮಣಿ ಸರವನ್ನೇ ಎಗರಿಸಲಾಗಿದೆ. ಈವೇಳೆ ಬಸ್ಸಿನಲ್ಲಿ ಪ್ರಯಾಣಿಕರ ಭಾರೀ  ಸಂದಣಿಯಿತ್ತು. ಬಸ್ಸಿನಿಂದ ಇಳಿದ ಬಳಿಕವಷ್ಟೇ ಸರ ಕಳವುಗೈ ಯ್ಯಲ್ಪಟ್ಟ ವಿಷಯ ಅವರ ಗಮನಕ್ಕೆ ಬಂದಿದೆ.

ಪಂಚಾಯತ್ ಸದಸ್ಯೆ ಕಮಲಾಕ್ಷಿ  ಪತಿ ಜತೆ ಚಟ್ಟಂಚಾಲ್ ನವರಾತ್ರಿ ಉತ್ಸವದಂದು ಮಹಾಲಕ್ಷ್ಮೀಪುರ ಕ್ಷೇತ್ರಕ್ಕೆ   ಹೋಗಿದ್ದರು. ಆವೇಳೆ ಕ್ಷೇತ್ರದಲ್ಲಿ ಭಾರೀ ಭಕ್ತ ಸಂದಣಿಯಿತ್ತು. ಕ್ಷೇತ್ರ ತಲುಪಿದಾಗಲೇ ಅವರ ಕುತ್ತಿಗೆಯಲ್ಲಿದ್ದ ನಾಲ್ಕೂವರೆ ಪವನ್‌ನ ಚಿನ್ನದೊಡವೆ ಕಳವುಹೋದ ವಿಷಯ ಗಮನಕ್ಕೆ ಬಂದಿದೆ.  ಕ್ಷೇತ್ರ ಆವರಣದೊಳಗೆ ಕಳ್ಳರು ಸರ ಎಗರಿಸಿರಬಹುದೆಂದು ಶಂಕಿಸಲಾಗುತ್ತಿದೆ. ಸರ ಕಳವು ಹೋದ ಬಗ್ಗೆ ಈ ಇಬ್ಬರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಷೇತ್ರಗಳ ಉತ್ಸವದ ವೇಳೆ ಭಕ್ತರ ಸೋಗಿನಲ್ಲಿ ಮತ್ತು ಬಸ್ಸುಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನದೊ ಡವೆಗಳನ್ನು ಬಹಳ ಚಾಣಾಕ್ಷತನ ದಿಂದ   ಎಗರಿಸುವ ತಮಿಳು ಅಲೆಮಾರಿ ತಂಡಗಳು ಸಕ್ರಿಯವಾಗಿ ಕಾರ್ಯವೆಸಗು ತ್ತಿದೆ. ಈ ತಂಡಕ್ಕೆ ಸೇರಿದ ಯುವತಿಯರು ಕೈಯಲ್ಲಿ ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಜನಸಂದಣಿಯಿರುವ ಬಸ್ಸುಗಳಿಗೆ ಏರುತ್ತಾರೆ. ಈ ಬಸ್‌ಗಳಲ್ಲಿ  ಪ್ರಯಾಣಿಸುತ್ತಿರುವ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಚಿನ್ನದೊಡವೆ ಎಗರಿಸಿ ಪರಾರಿಯಾಗುತ್ತಿದೆ. ಉತ್ಸವ ನಡೆಯುತ್ತಿರುವ ಕ್ಷೇತ್ರಗಳಲ್ಲೂ  ಅಲೆಮಾರಿ ತಂಡದ ಮಹಿಳೆಯರು ಇದೇ ರೀತಿಯ ಪ್ರಯೋಗನಡೆಸಿ ಚಿನ್ನದೊಡವೆ ಎಗರಿಸಿ ಪರಾರಿಯಾಗುತ್ತಾರೆ.   ಇದಲ್ಲದೆ ಬೈಕ್‌ಗಳಲ್ಲಿ ಬಂದು ಮಹಿಳೆಯರ ಕುತ್ತಿಗೆ ಯಿಂದ   ಸರ ಎಗರಿಸಿ ಪರಾರಿಯಾಗುವ ತಂಡಗಳೂ ಕಾರ್ಯವೆಸಗುತ್ತಿದೆ. ತಮಿಳು ಅಲೆಮಾರಿ ತಂಡಗಳ ಹಿಂದೆ ಒಂದು ದೊಡ್ಡ ಜಾಲವೇ ಕಾರ್ಯವೆಸಗುತ್ತಿದೆ. ಈ ಜಾಲ ದಲ್ಲಿ ಸಿಲುಕಿದ ಮಹಿಳೆಯರು ಬಂಧ ಕ್ಕೊಳಗಾದಲ್ಲಿ ನಷ್ಟಗೊಂಡ ಚಿನ್ನದ ಮೌಲ್ಯ ವನ್ನು ನ್ಯಾಯಾಲಯದಲ್ಲಿ ಮುಂಗಡವಾಗಿ  ಮುಚ್ಚಳಿಕೆ ರೂಪದಲ್ಲಿ  ಪಾವತಿಸಿ ಅವರನ್ನು ಜಾಮೀನಿನಲ್ಲಿ ಬಿಡಿಸಲು  ಹೊರಗಿನ ದೊಡ್ಡ ವಕೀಲರು ಆಗಮಿಸಿ   ಬಿಡುಗಡೆಗೊಳಿಸು ತ್ತಾರೆ. ಈ ರೀತಿ ಬಂಧಿತರಾಗಿ ಕಾಸರ ಗೋಡಿನಲ್ಲಿ ನ್ಯಾಯಾಂಗ ಬಂಧನಕ್ಕೊಳ ಗಾದ ಹಲವು ತಮಿಳು ಅಲೆಮಾರಿ ತಂಡದ ಯುವತಿಯರನ್ನು ಲಕ್ಷ  ರೂ.ತನಕ  ಮುಚ್ಚಳಿಕೆಯಾಗಿ ಸಿಜೆಎಂ ನ್ಯಾಯಾಲಯದಲ್ಲಿ ಮುಂಗಡವಾಗಿ ಪಾವತಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಹಲವು ಘಟನೆಗಳು ನಡೆದಿವೆ. ಆದುದರಿಂದ ಚಿನ್ನದೊಡವೆ ಧರಿಸುವವರು   ಜಾಗರೂಕರಾಗಿರಬೇಕೆಂದು ಪೊಲೀಸರು ನಿರ್ದೇಶಿಸಿದ್ದಾರೆ.

NO COMMENTS

LEAVE A REPLY