ಟ್ಯಾಂಕರ್ ಲಾರಿ ಢಿಕ್ಕಿ: ಆಸ್ಪತ್ರೆಯಲ್ಲಿದ್ದ ಬಾಲಕಿ ಮೃತ್ಯು

0
314

ಉಪ್ಪಳ: ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಟ್ಯಾಂಕರ್ ಲಾರಿ ಹಿಂಭಾಗಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಜಖಂಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ(೮) ಇಂದು ಪೂರ್ವಾಹ್ನ ಕೊನೆಯುಸಿರೆಳೆದಳು. ಈಕೆ ಹೇರೂರು ತಾಡ ಚಿದಾನಂದ ಮಯ್ಯರ ಪುತ್ರಿಯಾಗಿದ್ದಾಳೆ.  ಕಯ್ಯಾರು ಡೋನ್ ಬಾಸ್ಕೋ ಶಾಲೆಯ ವಿದ್ಯಾರ್ಥಿನಿಯಾದ ಈಕೆ ತಾಯಿ ಕಾವೇರಿ, ಸಹೋದರಿ ಮನ್ವಿತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾಳೆ.

NO COMMENTS

LEAVE A REPLY