ರಸ್ತೆ ಕಾಮಗಾರಿ ಮೊಟಕು: ಎಐವೈಎಫ್ನಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

0
23

ಮಂಜೇಶ್ವರ: ರಸ್ತೆಯನ್ನು ಸಂಚಾರ ನಿಷೇಧಿಸಿ, ಕಾಮಗಾರಿಯೂ ನಡೆಸದೆ ಸ್ಥಳೀಯರಿಗೆ ಸಂಚಾರ ಸಮಸ್ಯೆ ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ಎಐವೈಎಫ್ ಇಂದು ಬೆಳಿಗ್ಗೆ ಹೊಸಂಗಡಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿತು. ಹೊಸಂಗಡಿ ರೈಲ್ವೇ ಗೇಟ್‌ನಿಂದ ಒಳದಾರಿಯಾಗಿ ಉದ್ಯಾ ವರ ರೈಲ್ವೇ ಗೇಟ್ ವರೆಗಿನ ರಸ್ತೆಯನ್ನು ದುರಸ್ತಿ ನಿಮಿತ್ತ ಮುಚ್ಚುಗಡೆಗೊಳಿಸಲಾ ಗಿದ್ದು, ಈ ಭಾಗದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ಆದರೆ ಕಳೆದ ಒಂದು  ತಿಂಗಳಿಂದ ರಸ್ತೆ ಅಗೆದುಹಾಕಿ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಇದೀಗ ಮೊಟಕು ಗೊಳಿಸಲಾಗಿದೆ. ಇದನ್ನು ವಿರೋಧಿಸಿ ಎಐವೈಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಇಂದು ನಡೆದ ಪ್ರತಿ ಭಟನೆಯನ್ನು ಎಐವೈಎಫ್ ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಲೋಕಲ್  ಕಾರ್ಯದರ್ಶಿ ಶ್ರೀಧರ ಆರ್.ಕೆ ಅಧ್ಯಕ್ಷತೆ ವಹಿಸಿದರು. ದಯಾಕರ ಮಾಡ, ಸುಧೀರ್ ಶೆಟ್ಟಿ, ಪ್ರಥಮ್, ನಾರಾಯಣ, ರಾಮಕೃಷ್ಣ ಆಚಾರ್, ಕೀರ್ತನ್, ಪುರುಷೋತ್ತಮ, ಅಶೋಕ ದುರ್ಗಿಪಳ್ಳ ಭಾಗವಹಿಸಿದರು. ಸಿಪಿಐ ಕಚೇರಿ ಬಳಿಯಿಂದ ಆರಂಭ ಗೊಂಡ ಮೆರವಣಿಗೆಗೆ ಮುಸ್ತಫ ಎಂ.ಡಿ, ಶಾಂತರಾಮ, ಹರೀಶ್ ನಾಯ್ಕ್, ಶರತ್ ಮಜಿಬೈಲ್ ನೇತೃತ್ವ ನೀಡಿದರು.

ಈತಿಂಗಳ ೧೯ರಿಂದ ಮಂಜೇಶ್ವರ ಶ್ರೀ ಅನಂತೇಶ್ವರ ಕ್ಷೇತ್ರದಲ್ಲಿ ಷಷ್ಠಿ ಉತ್ಸವ ನಡೆಯಲಿದ್ದು, ಇದಕ್ಕೂ ಮೊದಲು ತಾತ್ಕಾಲಿಕವಾಗಿ ದುರಸ್ತಿಗೊ ಳಿಸಿ  ರಸ್ತೆ ಸಂಚಾರ ಮುಕ್ತಗೊಳಿಸ ಬೇಕೆಂದು ಆಗ್ರಹಿಸಲಾಯಿತು. ಇಲ್ಲದಿದ್ದರೆ ೧೯ರಂದು ಬೆಳಿಗ್ಗೆ ಮಂಜೇಶ್ವರ ಪಿಡಬ್ಲ್ಯುಡಿ ಕಚೇರಿಗೆ ಎಲ್ಲಾ ಸಂಘಟನೆಗಳನ್ನು ಸೇರಿಸಿ ಮುತ್ತಿಗೆ ಹಾಕುವುದಾಗಿ ನೇತಾರರು ಎಚ್ಚರಿಸಿದ್ದಾರೆ.

NO COMMENTS

LEAVE A REPLY