ನಿರ್ಮಾಣ ವೇಳೆ ಗೋಡೆ ಕುಸಿದು ಕಲ್ಲಿನಡಿಗೆ ಸಿಲುಕಿದ ಯುವಕನ ರಕ್ಷಣೆ

0
334

ಬಂದ್ಯೋಡು: ಮನೆ ನಿರ್ಮಾಣ ಮಧ್ಯೆ ಗೋಡೆ ಕುಸಿದು ಕಲ್ಲಿನಡಿಗೆ ಬಿದ್ದ ಕಾರ್ಮಿಕನನ್ನು ಜೊತೆಯಲ್ಲಿ ದ್ದವರು ರಕ್ಷಿಸಿದ ಘಟನೆ ನಡೆದಿದೆ.
ಬಂದ್ಯೋಡು ಬಾಬುರವರ ಪುತ್ರ ಸೀನಪ್ಪ (೩೨)ರನ್ನು ಜಖಂಗೊಂಡು ಕಾಸರಗೋಡು ಆಸ್ಪತ್ರೆಗೆ ಸೇರಿಸ ಲಾಗಿದೆ. ನಿನ್ನೆ ಸಂಜೆ ಬಂದ್ಯೋಡಿನಲ್ಲಿ ನೂತನ ಮನೆ ನಿರ್ಮಾಣ ವೇಳೆ ಗೋಡೆ ಕುಸಿದು ಬಿತ್ತೆನ್ನಲಾಗಿದೆ. ಸೀನಪ್ಪ ಅವರು ಕಲ್ಲಿನಡಿಗೆ ಸಿಲುಕಿದ್ದರು. ತಕ್ಷಣ ಜೊತೆಯಲ್ಲಿದ್ದ ಕಾರ್ಮಿಕರು ಕಲ್ಲುಗಳನ್ನು ಸರಿಸಿ ಗಂಭೀರಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸಿದರು.

NO COMMENTS

LEAVE A REPLY