ರೈಲುಹಳಿಯಲ್ಲಿ ಯುವಕನ ಮೃತದೇಹ ಪತ್ತೆ

0
271

ಕಾಸರಗೋಡು: ಕಾಸರಗೋಡು ಸಿಪಿಸಿಆರ್‌ಐ ಬಳಿಯ ರೈಲ್ವೇ ಹಳಿ ಬಳಿ ಯುವಕನೋರ್ವನ ಮೃತದೇಹ ರೈಲು ಗಾಡಿ ಢಿಕ್ಕಿಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದುಬೆಳಿಗ್ಗೆ ಪತ್ತೆಯಾಗಿದೆ. ಮೃತವ್ಯಕ್ತಿಯ ಗುರುತುಪತ್ತೆಹಚ್ಚಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿ ಕಪ್ಪುಬಣ್ಣದ ಪ್ಯಾಂಟ್ ಮತ್ತು ನೀಲಿ  ಕಪ್ಪು ಬಣ್ಣದ ಗೆರೆಹೊಂದಿರುವ ಅಂಗಿ ಧರಿಸಿದ್ದನು. ಊರವರು ಮೊದಲು ಮೃತದೇಹವನ್ನು ಪತ್ತೆಹಚ್ಚಿದರು. ಬಳಿಕ ಅವರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

NO COMMENTS

LEAVE A REPLY