ಸಂಬಂಧಿಕರ ಚಿನ್ನ ಪಡೆದು ವಂಚನೆ ಪತಿ ಸಹಿತ ಮೂವರ ವಿರುದ್ಧ ದೂರು

0
333

ಮುಳ್ಳೇರಿಯ: ಮದುವೆ ಸಂದರ್ಭದಲ್ಲಿ ನೀಡಿದ ವರದಕ್ಷಿಣೆ ಸಾಲ ದೆಂದು ಹೇಳಿ ಮತ್ತೆ ಪತ್ನಿಯಿಂದ ಚಿನ್ನಾಭರಣ ಪಡೆದು ವಂಚಿಸಿದ ನೆಂದು ಪತಿ ಹಾಗೂ ಆತನ ಸಂಬಂ ಧಿಕರ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ.
ದೇಲಂಪಾಡಿ ಮೊಯ್ದೀನ್‌ರ ಪುತ್ರಿ ಶಾಹಿದಾ(೨೫) ನೀಡಿದ ದೂರಿನನ್ವಯ ಪತಿ ವೊಯಿತ್ತಡ್ಕ ಅಬ್ದುಲ್ ಮಜೀದ್, ಈತನ ಮಾವ ಮಹಮ್ಮದ್, ಅತ್ತೆ ನಫೀಸಾ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ಜನವರಿ ೨೫ರಂದು ಶಾಹಿದಾ ಹಾಗೂ ಅಬ್ದುಲ್ ಮಜೀದ್‌ರ ವಿವಾಹ ನಡೆದಿದ್ದು, ಈ ಸಂದರ್ಭದಲ್ಲಿ ವರದಕ್ಷಿಣೆಯಾಗಿ ೧೪ ಪವನ್ ಚಿನ್ನ ಹಾಗೂ ೪ ಲಕ್ಷ ರೂ. ನಗದು ನೀಡಲಾಗಿತ್ತು. ಒಂದು ವಾರದಲ್ಲಿ ಇವರು ಮತ್ತೆ ೧೬ ಪವನ್ ಚಿನ್ನಕ್ಕಾಗಿ ಆಗ್ರಹಿಸಿದರು. ಸಂಬಂಧಿಕರಿಂದಾದರೂ ಚಿನ್ನ ತರಬೇಕು, ಒಂದು ತಿಂಗಳೊಳಗೆ ಹಿಂತಿರುಗಿಸಬಹುದು ಎಂದು ತಿಳಿಸಿದುದನ್ವಯ ಸಂಬಂಧಿಕರಿಂದ ೧೬ ಪವನ್ ಚಿನ್ನ ಪಡೆದು ನೀಡಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಚಿನ್ನ ಹಿಂತಿರುಗಿಸದೆ, ಮೋಸ ಮಾಡಲಾಗಿದೆಯೆಂದೂ ಇದೀಗ ತಾಯಿ ಮನೆಯಲ್ಲಿರುವ ನನ್ನನ್ನು ಪತಿ ಮನೆಗೆ ಕರೆದುಕೊಂಡು ಹೋಗುವುದಿಲ್ಲವೆಂದೂ, ಮಾನಸಿಕ ಪೀಡನೆ ನೀಡುತ್ತಿದ್ದಾರೆಯೆಂದು ಶಾಹಿದಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

SHARE
Previous articleಯುವಕ ನಿಧನ
Next article27-11-2015

NO COMMENTS

LEAVE A REPLY