ನಗರದ ಹೆದ್ದಾರಿಯಲ್ಲಿ ಕಾರು ಢಿಕ್ಕಿ ಹೊಡೆದು ಯುವಕ ಮೃತ್ಯು

0
37

ಕಾಸರಗೋಡು: ನಗರದ ನುಳ್ಳಿಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ.   ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಲಿಲ್ಲ.  ಕರ್ನಾಟಕ ನಿವಾಸಿಯಾಗಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ರಾತ್ರಿ ೮.೩೦ರ ವೇಳೆ ಅಪಘಾತವುಂಟಾಗಿದೆ. ಕಾಸರಗೋಡಿನಿಂದ ಬೋವಿಕ್ಕಾನ ಭಾಗಕ್ಕೆ ತೆರಳುತ್ತಿದ್ದ ಕಾರು ಯುವಕನಿಗೆ ಢಿಕ್ಕಿಹೊಡೆದಿದೆ.  ಗಂಭೀರ ಗಾಯಗೊಂಡ ಯುವಕನನ್ನು ಪೊಲೀಸರು ನಗರದ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ನಿಧನ ಸಂಭವಿಸಿದೆ.

ಮೃತ ವ್ಯಕ್ತಿಯಲ್ಲಿದ್ದ ಮೊಬೈಲ್ ಸಿಮ್ ಕಾರ್ಡ್ ಪರಿಶೀಲಿಸಿದಾಗ ಅದು ಕರ್ನಾಟಕದ ಕಲಬುರ್ಗಿ ಗುಲಾಜೆ ಆಲಂದ್ ಎಂಬಲ್ಲಿನ ಹನುಮಂತ ಎಂಬವರಪುತ್ರ ರಾಜು ಹನುಮಂತ (೩೦) ಎಂಬವರ ಹೆಸರಿನಲ್ಲಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ನಗರಠಾಣೆ ಪೊಲೀಸರು ಕಲಬುರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಇದೇ ವೇಳೆ ಅಪಘಾತ ಬಳಿಕ ನಿಲ್ಲಿಸದೆ ಪರಾರಿಯಾದ ಕಾರನ್ನು ನಾಗರಿಕರು ತಡೆದು ನಿಲ್ಲಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಚಾಲಕ ಪೊವ್ವಲ್ ನಿವಾಸಿ ನಿಸಾಫ್ (೩೨)ನನ್ನು ಟ್ರಾಫಿಕ್ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.

NO COMMENTS

LEAVE A REPLY