ಹಫ್ತಾ ಕೇಳಿ ಅಂಗಡಿಗೆ ತಲುಪಿದ ತಂಡದಿಂದ ಹಲ್ಲೆ: ನಾಲ್ವರಿಗೆ ಗಾಯ

0
52

ಕುಂಬಳೆ: ಹಫ್ತಾ ಕೇಳಿ ಅಂಗಡಿಗೆ ತಲುಪಿದ ತಂಡ ನೌಕರರಿಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ರೆಡಿಮೇಡ್ ಜವುಳಿ ಅಂಗಡಿಯೊಂದರ ನೌಕರರೂ, ಉಪ್ಪಳ ಹಿದಾಯತ್ ಬಜಾರ್‌ನ ನಿವಾಸಿಗಳಾದ ಕಲಂದರ್ ಇರ್ಷಾದ್ (೨೪), ಇಬ್ರಾಹಿಂ (೨೪), ಇಸ್ಮಾ ಯಿಲ್ ಸಿನಾನ್ (೧೭),  ಅಂಶಾದ್ (೧೭) ಎಂಬವರು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ಇವರು ನೀಡಿದ ದೂರಿನಂತೆ ಮಹ್‌ಶೂಕ್, ಮಹ್‌ಶರ್, ಅಫ್ಸಲ್ ಸಹಿತ ಏಳು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.

ನಿನ್ನೆ ಸಂಜೆ ಅಂಗಡಿಗೆ ತಲುಪಿದ ಏಳು ಮಂದಿ ತಂಡ ಹಫ್ತಾ ಕೇಳಿದೆ. ಆದರೆ ಹಣವಿಲ್ಲವೆಂದು ತಿಳಿಸಿದಾಗ ತಂಡ ತಮ್ಮ ಮೇಲೆ ಹಲ್ಲೆಗೈದಿದೆಯೆಂದು ಗಾಯಾಳುಗಳು ಆರೋಪಿಸಿದ್ದಾರೆ.

NO COMMENTS

LEAVE A REPLY