ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆತ್ನ: ಸ್ಥಿತಿ ಗಂಭೀರ

0
48

ಪೆರ್ಲ: ಯುವತಿಯೋರ್ವೆ ಇಲಿವಿಷ ಸೇವಿಸಿ ಗಂಭೀರ ಸ್ಥಿತಿ ಯಲ್ಲಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಉಕ್ಕಿನಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ವತ್ಸಲ (೩೨) ಎಂಬಾಕೆ ವಿಷ ಸೇವಿಸಿದ್ದು, ಈಕೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಈಕೆಯ ಪತಿ ಆಲಪ್ಪುಳ ನಿವಾಸಿ ಶ್ರೀಕುಮಾರ್(೩೬)ನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಆರು ವರ್ಷಗಳ ಹಿಂದೆ ಶ್ರೀಕುಮಾರ್ ಪೆರ್ಲಕ್ಕೆ ತಲುಪಿದ್ದನು. ಮರದ ಕೆಲಸ ನಿರ್ವಹಿಸುತ್ತಿದ್ದ ಈತ ಐದು ವರ್ಷ ಹಿಂದೆ ಏಳ್ಕಾನ ನಿವಾಸಿ ವತ್ಸಲಳನ್ನು ವಿವಾಹವಾಗಿದ್ದನು. ಅನಂತರ ಇವರು ಉಕ್ಕಿನಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಇವರಿಗೆ ಮೂರು ವರ್ಷದ ಪುತ್ರನಿದ್ದಾನೆ.

ನಿರಂತರ ಮದ್ಯ ಸೇವಿಸುತ್ತಿದ್ದ ಶ್ರೀಕುಮಾರ್ ಮನೆಗೆ ತಲುಪಿ ಜಗಳವಾಡುತ್ತಿದ್ದನೆಂದು ಹೇಳಲಾಗು ತ್ತಿದೆ. ನಿನ್ನೆ ಸಂಜೆಯೂ ದಂಪತಿ ಮಧ್ಯೆ ವಾಗ್ವಾದ, ಜಗಳವುಂಟಾಗಿರು ವುದಾಗಿಯೂ, ಅನಂತರ ವತ್ಸಲ ಇಲಿವಿಷ ಸೇವಿಸಿದ್ದಳೆಂದು ಇದರಿಂದ ಯುವತಿಯನ್ನು ಮೊದಲು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಸ್ಥಿತಿ ಗಂಭೀರ ವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

NO COMMENTS

LEAVE A REPLY