ಬ್ಯಾಂಕ್ ದರೋಡೆ ಪ್ರಕರಣ:ಏಳು ಮಂದಿ ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

0
288

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ದರೋಡೆಗೆ ಒಳಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಆ ಪ್ರಕರ ಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯ ನ್ಯಾಯಾಂಗ ಬಂಧನದಿಂದ ನಿನ್ನೆ ಮತ್ತೆ ಪೊಲೀಸ್ ಕಸ್ಟಡಿಗೆ ಬಿಟ್ಟು ಕೊಟ್ಟಿದೆ.
ಬಂದ್ಯೋಡು ರೈಫಾ ಮಂಜಿಲ್ ನ ಮುಜೀಬ್ ರಹಿಮಾನ್(೨೭), ಬಂದ್ಯೋಡು ಪಚ್ಚಂಬಳ ಬೈತುಲ್ ಕಲ್ವಾರದ ಮುಹಮ್ಮದ್ ಶೆರೀಫ್ ಎ.(೪೧), ಕೂಡ್ಲು ಚೌಕಿ ಮಜಲ್ ಹೌಸ್‌ನ ಶಾನವಾಸ್ ಅಲಿಯಾಸ್ ಶಾನು(೨೦), ಉಳಿಯತ್ತಡ್ಕ ನೇಶನಲ್ ರಸ್ತೆ ಬಳಿಯ ಪುಳ್ಕೂರು ಹೌಸ್‌ನ ಅರ್ಷಾದ್(೨೪), ಚೌಕಿ ಗ್ರೀನ್ ಸ್ಟಾರ್ ಕ್ಲಬ್ ಬಳಿಯ ಕುನ್ನಿಲ್ ಹೌಸ್ ನ ಅಬ್ದುಲ್ ಮಶೂಕ್ ಎಂ.(೨೮), ಕೂಡ್ಲು ಚೌಕಿ ಬದರ್ ನಗರದ ಮುಹಮ್ಮದ್ ಶಬೀರ್ ಕೆ. ಎ. ಅಲಿಯಾಸ್ ಶಬೀರ್(೨೭) ಮತ್ತು ಕೂಡ್ಲು ಚೌಕಿ ಕುನ್ನಿಲ್ ಹೌಸ್‌ನ ಅಬ್ದುಲ್ ಕರೀಂ ಅಲಿಯಾಸ್ ಕರೀಂ(೩೫) ಎಂಬವರನ್ನು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ.
ಕೂಡ್ಲು ಬ್ಯಾಂಕ್ ದರೋಡೆಗೆ ಒಳಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಿಸಿ ಈ ಏಳು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನದಿಂದ ತಮ್ಮ ಕಸ್ಟಡಿಗೆ ಬಿಟ್ಟು ಕೊಡಬೇಕೆಂದು ಕೋರಿ ಕಾಸರ ಗೋಡು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ನ್ಯಾಯಾಲಯ ಅವರನ್ನು ನಿನ್ನೆಯಿಂದ ಇಂದಿನ ತನಕ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ.

NO COMMENTS

LEAVE A REPLY