ಬೈಕ್ಗಳು ಪರಸ್ಪರ ಢಿಕ್ಕಿಹೊಡೆದು ಯುವಕ ಮೃತ್ಯು ಇಬ್ಬರಿಗೆ ಗಂಭೀರ: ಒಂದು ಬೈಕ್ನಲ್ಲಿ ೫೮ ಬಾಟ್ಲಿ ಮದ್ಯ ಪತ್ತೆ

0
28

ಮುಂಡಿತ್ತಡ್ಕ: ಬೈಕ್‌ಗಳು ಪರಸ್ಪರ ಢಿಕ್ಕಿಹೊಡೆದು ಓರ್ವ ಯುವಕ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ೮.೩೦ರ ವೇಳೆ ಮುಂಡಿತ್ತಡ್ಕ ಬಳಿಯ ಗುಣಾಜೆ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತಕ್ಕೀ ಡಾದ ಒಂದು ಬೈಕ್‌ನಲ್ಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಪತ್ತೆಯಾಗಿದೆ. ಮಣಿಯಂಪಾರೆ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮಿಥಿಲಾಜ್ (೧೮) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಚೆನ್ನೆಗುಳಿ ನಿವಾಸಿಗಳಾದ ಅನ್ವೇಷ್ (೨೪), ಜಿತೇಶ್ (೧೭) ಎಂಬಿವರು ಗಂಭೀರ ಗಾಯಗೊಂಡಿದ್ದು ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತಪಟ್ಟ ಮಿಥಿಲಾಜ್ ಕಾಸರಗೋ ಡಿನ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂ ಟಿಂಗ್ ವಿದ್ಯಾರ್ಥಿಯಾಗಿದ್ದಾರೆ.  ಸಂಬಂಧಿ ಕನೂ ಗುಣಾಜೆ ನಿವಾಸಿಯಾದ ಶಫೀಕ್ ಇಂದು ಗಲ್ಫ್‌ಗೆ ತೆರಳುತ್ತಿದ್ದು ಈ ಹಿನ್ನೆಲೆ ಯಲ್ಲಿ ಅವರನ್ನು ಕಾಣಲೆಂದು ಮಿಥಿಲಾಜ್ ನಿನ್ನೆ ರಾತ್ರಿ ಬೈಕ್‌ನಲ್ಲಿ  ಮನೆಯಿಂದ ಹೊರಟಿದ್ದರು. ಗುಣಾಜೆಯಲ್ಲಿರುವ ಶಫೀಕ್‌ರ ಮನೆಗೆ ತೆರಳಿ ಮರಳುತ್ತಿದ್ದಾಗ ಗುಣಾಜೆಯಲ್ಲಿ ಎದುರುಭಾಗದಿಂದ ಆಗಮಿಸಿದ ಬೈಕ್ ಢಿಕ್ಕಿಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಿಥಿಲಾಜ್‌ರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಅವರು ಮೃತಪಟ್ಟರು.

ಅನ್ವೇಷ್ ಹಾಗೂ ಜಿತೇಶ್ ಸಂಚರಿ ಸುತ್ತಿದ್ದ ಬೈಕ್‌ನಿಂದ ೫೮ ಬಾಟ್ಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಪತ್ತೆಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಪಘಾತ ಬಗ್ಗೆ ಬದಿಯಡ್ಕ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಿಥಿ ಲಾಜ್‌ರ ಮೃತದೇಹವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದು ಊರಿಗೆ ಕೊಂಡೊಯ್ಯಲಾಗುವುದು.

ಮೃತರು ತಂದೆ, ತಾಯಿ ರುಖಿಯ, ಸಹೋದರ-ಸಹೋದರಿಯರಾದ ಹಸೀನ, ಫಯರೂಸ್, ಪರ್ಸಾನ, ಹಮೀದ್, ಅಮೀರ್, ಫಾರೂಕ್, ಇರ್ಶಾದ್, ಕಬೀರ್, ಹರ್ಷಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY