ಮನೆ ಕುಸಿತ: ಬಡ ಕುಟುಂಬ ವಾಸಕ್ಕೆ ಪರದಾಟ

0
293

ಮಂಜೇಶ್ವರ: ಇಲ್ಲಿನ ಮಿತ್ತಕನಿಲ ಎಂಬಲ್ಲಿ ಕೊರಗಪ್ಪ ಎಂಬವರ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದ್ದು ಇದರಿಂದ ಕುಟುಂಬಕ್ಕೆ ವಾಸಕ್ಕೆ ಸೌಕರ್ಯವಿ ಲ್ಲದಂತಾಗಿದೆ.
ನಿನ್ನೆ ಸಂಜೆ ದಿಢೀರನೆ ಮನೆ ಕುಸಿದಿದೆ. ಹೆಂಚಿನ ಮನೆಯ ಛಾವಣಿ ಪೂರ್ತಿ ಕುಸಿದಿದ್ದು ಭಾರೀ ನಾಶನಷ್ಟ ಸಂಭವಿಸಿದೆ. ಘಟನೆ ವೇಳೆ ಮನೆಯೊಳಗೆ ಯಾರೂ ಇಲ್ಲದಿರುವುದು ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.
ತೆಂಗಿನಕಾಯಿ ಕೊಯ್ಯುವ ಕೆಲಸ ನಿರ್ವಹಿಸುತ್ತಿದ್ದ ಕೊರಗಪ್ಪರಿಗೆ ಕಳೆದ ೧೫ ವರ್ಷಗಳಿಂದ ಅಸೌಖ್ಯ ಬಾಧಿಸಿದ್ದು, ಇದರಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲಿದ್ದಾರೆ. ಇವರ ಪತ್ನಿ ದೇವಕಿ ಕನಿಲ ಶ್ರೀ ಭಗವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿಂದ ಲಭಿಸುವ ವೇತನದಿಂದಿಂದಲೇ ಪತಿಯ ಚಿಕಿತ್ಸೆ ಹಾಗೂ ಜೀವನ ಸಾಗಿಸಬೇಕಾಗಿದೆ. ಹೀಗಿರುವಾಗಲೇ ಇವರು ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಇದರಿಂದ ಇವರು ಇದೀಗ ಪರಿಸರ ನಿವಾಸಿಯೊಬ್ಬರ ಮನೆಯಲ್ಲಿದ್ದಾರೆ.

NO COMMENTS

LEAVE A REPLY