ಬಟ್ಟೆ ಅಂಗಡಿಯಿಂದ ನಗದು ಸಹಿತ ಬಟ್ಟೆಬರೆ ಕಳವು

0
26

ಉಪ್ಪಳ: ರೆಡಿಮೆಡ್ ಬಟ್ಟೆ ಅಂಗಡಿಯಿಂದ ೭ ಸಾವಿರ ರೂ., ೪೦ ಸಾವಿರ ರೂ. ಮೌಲ್ಯದ ಬಟ್ಟೆಬರೆ ಕಳವುಗೈದ ಘಟನೆ ಮಜೀರ್‌ಪಳ್ಳದಲ್ಲಿ ನಡೆದಿದೆ. ವರ್ಕಾಡಿ ಮಜೀರ್‌ಪಳ್ಳದಲ್ಲಿ ಕಾರ್ಯಾಚರಿಸುತ್ತಿ ರುವ ಕೋಳ್ಯೂರು ನಿವಾಸಿ ಯಶವಂತ ಕುಮಾರ್ ಎಂಬವರ ಶ್ರೀಲಕ್ಷ್ಮಿ ಕಲೆಕ್ಷನ್ ರೆಡಿಮೆಡ್ ಬಟ್ಟೆ ಅಂಗಡಿಯಿಂದ ಈ ತಿಂಗಳ ೧೪ರಂದು ರಾತ್ರಿ ಕಳವು ನಡೆಸಲಾಗಿದೆ. ಶಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರವರಿನಲ್ಲಿರಿಸಿದ ೭ ಸಾವಿರ ಹಾಗೂ ೪೦ ಸಾವಿರ ರೂ.ಗಳ ಬಟ್ಟೆಬರೆಗಳನ್ನು ಕಳವು ನಡೆಸಿರುವುದಾಗಿ ಮಾಲಕ ದೂರಿದ್ದಾರೆ. ನಿನ್ನೆ ಬೆಳಿಗ್ಗೆ ಅಂಗಡಿಗೆ ತೆರಳಿದಾಗಲೇ ಕಳವು ಕೃತ್ಯ ಗಮನಕ್ಕೆ ಬಂದಿದೆ. ಈ ಬಗ್ಗೆ ಯಶವಂತ ಕುಮಾರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY