ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ…! ಕರಾವಳಿ ಪೊಲೀಸ್ ಠಾಣೆ ಪೊದೆಯಿಂದಾವೃತ

0
272

ಕುಂಬಳೆ: ಸಮುದ್ರ ಮೂಲಕ ನಡೆಯುವ ಅಕ್ರಮ ಚಟುವಟಿಕೆ ತಡೆಗಟ್ಟಲೆಂದು ಸ್ಥಾಪಿಸಿದ ಕರಾವಳಿ ಪೊಲೀಸ್ ಠಾಣೆ ಉದ್ಘಾಟನೆಗೆ ಕಾಲ ಕೂಡಿಬರದೇ ಇದ್ದು ಇದರಿಂದ ಸುಸಜ್ಜಿತ ಕಟ್ಟಡ ಕಾಡುಪೊದೆಗಳಿಂ ದಾವೃತವಾಗಿ ಬಿಕೋ ಎನ್ನುತ್ತಿದೆ.
ಕುಂಬಳೆ ಬಳಿಯ ಶಿರಿಯ ಸೇತು ವೆಯ ಪಶ್ಚಿಮಭಾಗದಲ್ಲಿ ಈ ಕರಾವ ಳಿ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಸಮುದ್ರಮೂಲಕ ನಡೆಯಬಹುದಾದ ಭಯೋತ್ಪಾದನೆ, ಅಕ್ರಮ ನುಸುಳು ವಿಕೆ, ಹೊಯ್ಗೆ ಮಾಫಿಯಾಗಳ ಅಟ್ಟಹಾಸ ತಡೆಗಟ್ಟುವುದರೊಂದಿಗೆ ಮೀನು ಕಾರ್ಮಿಕರಿಗೆ ರಕ್ಷಣೆ ಒದಗಿ ಸುವ ಉದ್ದೇಶದಿಂದ ಈ ಕರಾವಳಿ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಇದು ಸ್ಥಾಪನೆಯಾಗಿ ಒಂದೂವರೆ ವರ್ಷವಾದರೂ ಉದ್ಘಾಟನೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಇದರಿಂದ ಈ ಕಟ್ಟಡದ ಸುತ್ತಮುತ್ತ ಕಾಡು ಆವರಿಸಿ ಕೊಂಡಿದೆ. ಠಾಣೆಯ ಕಾವಲಿಗಾಗಿ ಕುಂಬಳೆ ಠಾಣೆಯ ಇಬ್ಬರು ಪೊಲೀ ಸರನ್ನು ನಿಯೋಜಿಸಲಾಗಿದೆ. ಇವರು ಕಟ್ಟಡದ ಕಾವಲುಗಾರರಾಗಿಯೇ ಕಾರ್ಯನಿರ್ವಹಿಸುತ್ತಾರಲ್ಲದೆ ಏನಾದರೂ ಅಕ್ರಮ ಚಟುವಟಿಕೆ ಎದುರಾದರೆ ತಡೆಗಟ್ಟಲಿರುವ ಯಾವುದೇ ಸೌಕರ್ಯ ಅವರಿಗೆ ನೀಡಿಲ್ಲವೆನ್ನಲಾಗಿದೆ. ಇದೇ ಸ್ಥಿತಿ ಮುಂದುವರಿದರೆ ಕರಾವಳಿ ಪೊಲೀಸ್ ಠಾಣೆ ಎಂಬುವುದು ಪ್ರದರ್ಶನವಸ್ತು ವಾಗಿ ಮಾತ್ರವೇ ಉಳಿದು ಕಟ್ಟಡ ಮೂಲೆಗುಂಪಾಗಲಿದೆ.

NO COMMENTS

LEAVE A REPLY