ಶಿಲಾನ್ಯಾಸ ನಡೆದು ನಾಳೆಗೆ ಎರಡು ವರ್ಷ: ನನಸಾಗದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆ

0
294

ಬದಿಯಡ್ಕ: ರಾಜ್ಯ ಸರಕಾರದ ವತಿಯಿಂದ ಉಕ್ಕಿನಡ್ಕದಲ್ಲಿ ಸ್ಥಾಪಿಸಲು ದ್ದೇಶಿಸಿದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಲಾನ್ಯಾಸ ನಡೆದು ನಾಳೆಗೆ ಎರಡು ವರ್ಷಗಳು ತುಂಬುತ್ತಿದ್ದು, ಆದರೆ ಕಟ್ಟಡ ನಿರ್ಮಾಣ ಮಾತ್ರ ಮರೀಚಿಕೆಯಾಗಿದೆ.
ಬದಿಯಡ್ಕ-ಎಣ್ಮಕಜೆ ಪಂಚಾ ಯತ್‌ನ ಗಡಿ ಭಾಗವಾದ ಉಕ್ಕಿನಡ್ಕದಲ್ಲಿ ೧೮೮ ಕೋಟಿ ರೂ. ಖರ್ಚಿನಲ್ಲಿ ನಬಾರ್ಡ್‌ನ ಸಹಾಯ ದೊಂದಿಗೆ ನಿರ್ಮಿಸಲುದ್ದೇಶಿಸಿದ ನೂತನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ೨೦೧೩ ನವೆಂಬರ್ ೩೦ರಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಶಿಲಾನ್ಯಾಸ ನೆರವೇರಿಸಿದ್ದರು.
೫೦೦ ಮಂದಿ ಒಳರೋಗಿಗಳಾಗಿ ದಾಖಲಿಸುವ ವ್ಯವಸ್ಥೆ ಹೊಂದಿರುವ ಬೃಹತ್ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲದೆ ಈ ಆಸ್ಪತ್ರೆ ಜತೆಗೆ ಪ್ರಥಮ ಬ್ಯಾಚ್‌ನಲ್ಲಿ ೧೦೦ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಶಿಕ್ಷಣ ಪಡೆಯುವ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ನಿರ್ಧರಿಸ ಲಾಗಿತ್ತು. ಇದಕ್ಕಾಗಿ ಉಕ್ಕಿನಡ್ಕ ಪರಿಸರದಲ್ಲಿ ೬೫ ಎಕರೆ ಸ್ಥಳವನ್ನು ಸರಕಾರ ವಶಪಡಿಸಿ ಸಂಬಂಧಪಟ್ಟವರಿಗೆ ನೀಡಿತ್ತು. ಶಿಲಾನ್ಯಾಸ ನಡೆಸಿ ಒಂದು ವರ್ಷದೊಳಗೆ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊ ಳ್ಳಲಿದೆಯೆಂದು ಮುಖ್ಯಮಂತ್ರಿ ತಿಳಿಸಿದ್ದರು. ಇದರಿಂದ ಎಂಡೋಸಲ್ಫಾನ್ ಪೀಡಿತ ಪ್ರದೇಶವಾದ ಇಲ್ಲಿನ ಜನತೆಗೆ ಹೊಸ ನಿರೀಕ್ಷೆ ಮೂಡಿತ್ತು. ಆದರೆ ಶಿಲಾನ್ಯಾಸದ ಬಳಿಕ ಯಾವುದೇ ಕಾರ್ಯ ನಡೆಯದಿರುವುದು ಸಾರ್ವಜನಿಕರಲ್ಲಿ ಅದರಲ್ಲೂ ಕಾಸರಗೋಡಿನ ಜನತೆಯಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಆಸ್ಪತ್ರೆಗೆ ಶಿಲಾನ್ಯಾಸ ಬಳಿಕ ಬಣ್ಪುತ್ತಡ್ಕ ರಸ್ತೆಯಿಂದ ಆಸ್ಪತ್ರೆ ನಿರ್ಮಿಸಲುದ್ದೇಶಿಸಿದ ಸ್ಥಳಕ್ಕೆ ರಸ್ತೆ ನಿರ್ಮಿಸಿ ಡಾಮರೀಕರಣ ನಡೆಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಡಾಮರು ಎದ್ದು ಹೋಗಿ ರಸ್ತೆ ಶೋಚನೀಯಾವಸ್ಥೆಗೆ ತಲುಪಿದೆ. ಇದು ಕಳಪೆ ಕಾಮಗಾರಿಯ ಪರಿಣಾಮ ಎಂಬ ಆರೋಪ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ವಿಜಿಲೆನ್ಸ್ ಕೇಸು ದಾಖಲಿಸಿ ತನಿಖೆಯ ಹಂತದಲ್ಲಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕಿಟ್ಕೋ ಸಂಸ್ಥೆಗೆ ನೀಡಲಾಗಿತ್ತು. ಇದರ ವಿಶೇಷ ಅಧಿಕಾರಿಯಾಗಿ ಡಾ. ಪಿ.ಜೆ.ಆರ್. ಪಿಳ್ಳೆಯವರನ್ನು ನೇಮಿಸಲಾಗಿತ್ತು. ಆರಂಭಿಕ ಹಂತದಲ್ಲಿ ಇದರ ಯೋಜನಾ ಮೊತ್ತ ೧೮೮ ಕೋಟಿ ರೂ. ಆಗಿದ್ದರೂ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಇದರ ವೆಚ್ಚವನ್ನು ಒಂದು ವರ್ಷ ಬಳಿಕ ೨೮೩ ಕೋಟಿ ರೂ.ಗೇರಿಸಲಾಗಿತ್ತು. ಆದರೆ ವೆಚ್ಚ ಹೆಚ್ಚಿಸುವುದಲ್ಲದೆ ಬೇರೆ ಯಾವುದೇ ಕಾಮಗಾರಿ ಇಲ್ಲಿ ನಡೆದಿಲ್ಲ. ಇದೇ ಆಸ್ಪತ್ರೆ ಜತೆಗೆ ಶಿಲಾನ್ಯಾಸ ನಡೆದ ಇತರ ಎರಡು ಜಿಲ್ಲೆಗಳ ಆಸ್ಪತ್ರೆಗಳು ಈಗಾಗಲೇ ಆರಂಭಗೊಂಡಿದೆ. ಆದರೆ ಉಕ್ಕಿನಡ್ಕ ಆಸ್ಪತ್ರೆ ಆರಂಭಕ್ಕೆ ಕ್ರಮ ಕೈಗೊಳ್ಳದಿರುವುದು ಕಾಸರಗೋಡಿನ ಜನರೊಂದಿಗೆ ಸರಕಾರ ತೋರುವ ಅವಗಣನೆಯಾಗಿದೆ ಎಂಬ ಆರೋಪ ಎಲ್ಲೆಡೆಯಿಂದ ಕೇಳಿ ಬರತೊಡಗಿದೆ. ಆಸ್ಪತ್ರೆಗೆ ಶಿಲಾನ್ಯಾಸ ನಡೆದು ಒಂದು ವರ್ಷ ಕಳೆದರೂ ಯಾವುದೇ ನಿರ್ಮಾಣ ಕಾಮಗಾರಿ ನಡೆಯದೇ ಇದ್ದಾಗ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಚಳವಳಿಗೆ ಮುಂದಾಗಿವೆ. ಆದರೆ ಯಾವುದೇ ಚಳವಳಿಗೆ ಸರಕಾರ ಮಣಿಯಲಿಲ್ಲ. ಆಸ್ಪತ್ರೆ ಕಾಮಗಾರಿ ನಡೆಯದ ಬಗ್ಗೆ ಕೆಲವು ತಿಂಗಳುಗಳ ಹಿಂದೆ ವಿಧಾನಸಭೆಯಲ್ಲಿ ಸ್ವರ ಕೇಳಿ ಬಂದಿದ್ದು ಈ ವೇಳೆ ಕಾಲಾವಧಿ ಯೊಳಗೆ ಕಾಮಗಾರಿ ಮುಗಿಸಿ ಕಾಲೇಜು ಆಸ್ಪತ್ರೆ ಕಾರ್ಯಾರಂಭ ಗೊಳ್ಳಲಿದೆಯೆಂದು ಸಂಬಂಧಪಟ್ಟ ಸಚಿವರು ಭರವಸೆ ನೀಡಿ ದ್ದರು. ಆದರೆ ಕಾಲಾವಧಿ ಮುಗಿದರೂ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಉಂಟಾಗಲಿಲ್ಲ.

NO COMMENTS

LEAVE A REPLY