ಯುವಕನಿಗೆ ಇರಿತ: ಆಸ್ಪತ್ರೆಗೆ

0
298

ಕಾಸರಗೋಡು: ಸೀತಾಂಗೋಳಿಯಲ್ಲಿ ನಿನ್ನೆ ರಾತ್ರಿ ಯುವಕನೋರ್ವನಿಗೆ ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಸೀತಾಂಗೋಳಿ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಸಿದ್ದಿಕ್ (೩೦) ಇರಿತಕ್ಕೀಡಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಿನ್ನೆ ರಾತ್ರಿ ೧೦ ಗಂಟೆ ವೇಳೆ ಮನೆಗೆ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ತಲುಪಿದ ಇಬ್ಬರು ಇರಿದರೆಂದು ಸಿದ್ದಿಕ್ ದೂರಿದ್ದಾರೆ. ನಿನ್ನೆ ಸಂಜೆ ತಂಡವೊಂದು ಮಹಿಳೆಯರಿಗೆ ಕಿರುಕುಳನೀಡಿದ್ದು, ಅದನ್ನು ಪ್ರಶ್ನಿಸಿದ ದ್ವೇಷವೇ ಇರಿತಕ್ಕೆ ಕಾರಣವೆಂದೂ ಆರೋಪಿಸಲಾಗಿದೆ.

NO COMMENTS

LEAVE A REPLY