ಕಾಟುಕುಕ್ಕೆಯಲ್ಲಿ ಕರ್ನಾಟಕ ನಿವಾಸಿ ಕೊಲೆ: ಆರೋಪಿಗಳ ಸುಳಿವು ಲಭ್ಯ; ಶೀಘ್ರ ಬಂಧನ ಸಾಧ್ಯತೆ

0
34

ಬದಿಯಡ್ಕ: ಕಾಟುಕುಕ್ಕೆಯಲ್ಲಿ ಕರ್ನಾಟಕ ಗದಗ ನಿವಾಸಿಯ ಕೊಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆಯೆಂದು ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ. ಕೊಲೆಗಡುಕರ ಸುಳಿವು ಲಭಿಸಿದ್ದು, ಅವರ ಚಲನವಲನಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕgಣದ ಕುರಿತು ೧೫ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ತದ್ವಿರುದ್ದ ಹೇಳಿಕೆ ನೀಡಿದವರನ್ನು ಪುನಃ ವಿಚಾರಣೆ ನಡೆಸಿ ನೈಜ ವಿಷಯವನ್ನು ಹೊರಗೆಡಹಲು ಪ್ರಯತ್ನಿಸಲಾಗಿದೆ. ಫೋರೆನ್ಸಿಕ್ ವಿಭಾಗ, ಪೊಲೀಸ್  ಶ್ವಾನದ ಸಹಾಯ ಪಡೆಯಲಾಗಿದೆ. ಇದುವರೆಗೆ ತನಿಖೆ ಉತ್ತಮ ರೀತಿಯಲ್ಲಿ ಸಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಗದಗ ನಿವಾಸಿ ಶರಣಪ್ಪರ ಮೃತದೇಹವು ಡಿಸೆಂಬರ್ ೩೦ರಂದು ಬೆಳಿಗ್ಗೆ ಕಾಟುಕುಕ್ಕೆ ಸಮೀಪದ ಪೆಲತ್ತಡ್ಕದ ಖಾಸಗಿ ವ್ಯಕ್ತಿಯೋರ್ವರ  ಹಿತ್ತಿಲಲ್ಲಿ ಪತ್ತೆಯಾಗಿತ್ತು. ಜೀರ್ಣಿಸಿದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಮಿಸಿದ ಬದಿಯಡ್ಕ ಪೊಲೀಸರು  ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವೇಳೆ ಮೃತದೇಹದ ತಲೆಯ ಹಿಂಭಾಗಕ್ಕೆ ಏಟು ಬಿದ್ದುದರಿಂದ ಸಾವು ಸಂಭವಿಸಿದೆ ಎಂದು  ತಿಳಿದುಬಂದಿತ್ತು. ಅನಂತರ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸ್ ಸರ್ಜನ್ ಕಾಟುಕುಕ್ಕೆಗೆ ಆಗಮಿಸಿ ಮೃತದೇಹ ಕಂಡುಬಂದ ಸ್ಥಳ ಪರಿಶೀಲಿಸಿದ್ದರು. ಬಳಿಕ  ನಡೆಸಿದ ತನಿಖೆಯಲ್ಲಿ ಮೃತದೇಹವು ಗದಗ ನಿವಾಸಿ ಶರಣಪ್ಪರದೆಂದು ತಿಳಿಯಿತು. ಶರಣಪ್ಪರ ಸಂಬಂಧಿಕರು ಆಗಮಿಸಿ ಮೃತದೇಹದ ಕತ್ತಿನಲ್ಲಿದ್ದ ತಾಯತದ ಗುರುತುಪತ್ತೆಹಚ್ಚಿದ್ದರು.

ಮೃತದೇಹದ ಗುರುತು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಕೊಲೆಗಾರರ ಜಾಡು ಹಿಡಿದ  ಪೊಲೀಸರು ಸ್ಥಳೀಯರಾದ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಹಲವರ ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ.

ಶರಣಪ್ಪರ ಕೊಲೆ ನಡೆಸಿದ ಪ್ರಕರಣದ ಆರೋಪಿಗಳ ಸ್ಪಷ್ಟ ಮಾಹಿತಿ ಲಭಿಸಿದೆಯೆಂದು ತನಿಖೆ ನಡೆಸು ತ್ತಿರುವ ಪೊಲೀಸರು ತಿಳಿಸಿದ್ದಾರೆ. ಕೆಲವೊಂದು ಮಾಹಿತಿಗಳು ಲಭಿಸಲಿದ್ದು, ಅನಂತರ ಆರೋಪಿ ಗಳನ್ನು ಬಂಧಿಸಲಾಗುವುದೆಂದು ಅವರು   ಹೇಳಿದ್ದಾರೆ. ಕಾಟುಕು ಕ್ಕೆಯ ಶರಣಪ್ಪರ ಕೊಲೆ ಆರೋಪಿ ಯನ್ನು ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

NO COMMENTS

LEAVE A REPLY