ಮಂಜೇಶ್ವರದಲ್ಲಿ ರೈಲು ಢಿಕ್ಕಿ ಹೊಡೆದು ಇಬ್ಬರು ಮಹಿಳೆಯರು, ಮಗು ಮೃತ್ಯು

0
36

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಳಿ ರೈಲು ಢಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಹಾಗೂ ೩ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ಸಂಭವಿಸಿದೆ. ಕುಂಜತ್ತೂರು ಪೊಸೋಟು ಸತ್ಯಡ್ಕದ ದಿ| ಕೆ.ಟಿ. ಅಬೂಬಕರ್ ಹಾಜಿಯವರ ಮಕ್ಕಳಾದ ಆಯಿಷ, ಆಮಿನ ಹಾಗೂ ಆಯಿಷರ ಮೂರು ವರ್ಷ ಪ್ರಾಯದ ಪುತ್ರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತದೇಹಗಳು ಪೂರ್ಣ ಛಿದ್ರಗೊಂಡಿದೆ. ಇಂದು ಮಧ್ಯಾಹ್ನ ರೈಲು ಹಳಿ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆಯೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY