ಚೆರ್ಕಳ-ಕಲ್ಲಡ್ಕ ರಸ್ತೆ ಹೊಂಡ : ಖಾಸಗಿ ಬಸ್ ನೌಕರರ ಮುಷ್ಕರ ೨ನೇ ದಿನಕ್ಕೆ; ಪ್ರಯಾಣಿಕರಿಗೆ ಸಮಸ್ಯೆ

0
38

ಬದಿಯಡ್ಕ: ರಸ್ತೆ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಖಾಸಗಿ ಬಸ್ ನೌಕರರು ನಡೆಸುತ್ತಿರುವ ಮುಷ್ಕರ ಅಧಿಕಾರಿಗಳ ಕಣ್ತೆರೆಸಿತು. ಆಳದ ಹೊಂಡಗಳು ತುಂಬಿಕೊಂಡು ಬಸ್ ಸಂಚಾರಕ್ಕೆ ಅಸಾಧ್ಯವಾದ ಚೆರ್ಕಳ-ಕಲ್ಲಡ್ಕ ರಸ್ತೆಯ ಹೊಂಡ ಮುಚ್ಚಲು ಅಗತ್ಯವಿರುವ ಡಾಮರು ಇಂದು ರಾತ್ರಿಯೊಳಗೆ ತಲುಪಲಿದೆಯೆಂದು ಪಿಡಬ್ಲ್ಯುಡಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಟಿ. ಹ್ಯಾರಿಸ್ ತಿಳಿಸಿದ್ದಾರೆ. ಡಾಮರು ಹೇರಿದ ಲಾರಿಗಳು ಕೊಚ್ಚಿಯಿಂದ ಹೊರಟಿರುವು ದಾಗಿಯೂ ಅವರು ತಿಳಿಸಿದ್ದಾರೆ.

ಇದೇ ವೇಳೆ ಹೊಂಡ ಮುಚ್ಚಲು ಆರಂಭಿಸಿದ ಬಳಿಕವೇ ಬಸ್ ಸಂಚಾರ ಪುನರಾರಂಭಿಸಲಾ ಗುವುದೆಂಬ ಧೃಡ ನಿಲುವು ಕೈಗೊಂಡ ಖಾಸಗಿ ಬಸ್ ನೌಕರರು ನಡೆಸುವ ಮುಷ್ಕರ ಎರಡನೇ ದಿನವಾದ ಇಂದೂ ಮುಂದುವರಿಯುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು, ಕೃಷಿಕರ ಸಹಿತ ಪ್ರಯಾಣಿಕರು ಇಂದು ಕೂಡಾ ಸಮಸ್ಯೆ ಎದುರಿಸುತ್ತಿದ್ದಾರೆ.

ಎಸ್.ಎಸ್.ಎಲ್.ಸಿ., ಪ್ಲಸ್‌ವನ್, ಪ್ಲಸ್‌ಟು ಮೋಡೆಲ್ ಪರೀಕ್ಷೆ ನಿನ್ನೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಮೊಟಕುಗೊಂಡಿರು ವುದರಿಂದ ಅತೀ ಹೆಚ್ಚು ತೊಂದರೆಗೀ ಡಾಗಿರುವುದು ವಿದ್ಯಾರ್ಥಿಗಳಾ ಗಿದ್ದಾರೆ. ಬಸ್ ನೌಕರರ ಮುಷ್ಕರ ದಿಂದ ಪ್ರಯಾಣ ಸಮಸ್ಯೆ ಎದುರಾಗಿ ದ್ದರೂ ರಸ್ತೆ ಅಭಿವೃದ್ಧಿಗಾಗಿ ಇದಕ್ಕಿಂ ತಲೂ ದೊಡ್ಡ ತೊಂದರೆಗಳನ್ನು ಎದುರಿಸಲು ಸಿದ್ಧವೆಂದು ನಾಗರಿಕರು ಹಾಗೂ ಪ್ರಯಾಣಿಕರು ತಿಳಿಸುತ್ತಿದ್ದಾರೆ.

ರಾಜ್ಯದಲ್ಲಿ ಯಾವುದೇ ರಸ್ತೆಗೂ ಉಂಟಾಗದ ದುಸ್ಥಿತಿ ಚೆರ್ಕಳ-ಕಲ್ಲಡ್ಕ ರಸ್ತೆಯಲ್ಲಿ ಕಂಡು ಬಂದಿದೆ. ಇದರಿಂದ ಈ ರಸ್ತೆಯಲ್ಲಿ ಪ್ರಯಾಣಿಸುವವರ ರೋಷ ಮುಗಿಲು ಮುಟ್ಟಿದೆ.

NO COMMENTS

LEAVE A REPLY